ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಪರೇಶ್ ಮೇಸ್ತ ಹತ್ಯೆ ಖಂಡಿಸಿ, ಬಿ.ಸಿ.ರೋಡಿನಲ್ಲಿ ವಿಶ್ವ ಹಿಂದು ಪರಿಷತ್ತು, ಬಜರಂಗದಳ, ಬಂಟ್ವಾಳ ಪ್ರಖಂಡ ವತಿಯಿಂದ ರಾಜ್ಯಪಾಲರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ಈ ವರೆಗೆ ಕೊಲೆ ಆರೋಪಿಗಳನ್ನು ಬಂದಿಸಲು ಅಸಾಧ್ಯ ವಾದ ರಾಜ್ಯ ಸರಕಾರದ ಬಗ್ಗೆ ನಮಗೆ ವಿಶ್ವಾಸವಿಲ್ಲ ಹಾಗಾಗಿ ಕೇಂದ್ರ ಸರಕಾರದ ಎನ್.ಐ.ಎ ತನಿಖಾ ತಂಡಕ್ಕೆ ಇದರ ತನಿಖೆಯನ್ನು ನೀಡುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ರಾಜ್ಯ ಸರಕಾರದ ಒತ್ತಡಕ್ಜೆ ಮಣಿಯದೆ ನಿಕ್ಷಪಕ್ಷಪಾತವಾಗಿ ತನಿಖೆ ನಡೆಸಲು ರಾಜ್ಯ ಪಾಲರು ಆದೇಶ ನೀಡಬೇಕು, ಹಿಂದೂಗಳ ಮೇಲೆ ನಡೆಯಿತ್ತರುವ ದೌರ್ಜನ್ಯ ತಡೆಯಲು ಸೂಕ್ತ ಕ್ರಮ ವಹಿಸಬೇಕು ಎಂದು ಒತ್ತಾಯಿಸಲಾಯಿತು. ಅನೇಕ ಬೇಡಿಕೆಗಳನ್ನು ಮುಂದಿಟ್ಟು ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಯೋಜಕ ಸರಪಾಡಿ ಅಶೋಕ್ ಶೆಟ್ಟಿ, ಪ್ರಮುಖರಾದ ಬಾಸ್ಕರ ಧರ್ಮಸ್ಥಳ, ಗುರುರಾಜ್ ಬಂಟ್ವಾಳ, ಅಕೇಶ್ ಬೆಂಜನಪದವು, ಸಚಿನ್ ಅಮ್ಮುಂಜೆ, ನಾಗೇಶ್ ಸಾಲೆತ್ತೂರು, ಶಿವಪ್ರಸಾದ್ ಧನುಪೂಜೆ, ಜಿತೇಂದ್ರ ಕೋಟ್ಯಾನ್ ಅಜ್ಕಿಬೆಟ್ಟು, ವಿನಿತ್, ರಾಜೇಶ್ ಪನೋಲಿಬೈಲು, ಪ್ರದೀಪ್ ಅಜ್ಜಿಬೆಟ್ಟು, ಅರುಣ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು