ಕಲ್ಲಡ್ಕ

ಡಿ.16ರಂದು ಸಂಜೆ ಕಲ್ಲಡ್ಕದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ

www.bantwalnews.com

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹನುಮಾನ್ ನಗರದಲ್ಲಿ ಹೊನಲು ಬೆಳಕಿನ ಆಕರ್ಷಕ ಕ್ರೀಡೋತ್ಸವ ಶನಿವಾರ ಡಿಸೆಂಬರ್ 16 ರಂದು ನಡೆಯಲಿದೆ.
ಈ ಸಂದರ್ಭ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ವಹಿಸುವರು.

ಶಿಶುಮಂದಿರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ, ಹಾಗೂ ಪದವಿ ತರಗತಿಗಳ 3300 ವಿದ್ಯಾರ್ಥಿಗಳು ಸಾಮೂಹಿಕವಾಗಿ ಪ್ರದರ್ಶನ ಮಾಡುವ ಶಾರೀರಿಕ ಹಾಗೂ ಸಾಂಸ್ಕೃತಿಕ ವೈವಿಧ್ಯಮಯ ಕ್ರೀಡೋತ್ಸ ಸಂಜೆ 5.45 ರಿಂದ ಹೊನಲು ಬೆಳಕಿನಲ್ಲಿ ನಡೆಯಲಿದೆ.

ಈ ಸಂದರ್ಭ, ವಿದ್ಯಾರ್ಥಿಗಳಿಂದ ಸಂಚಲನ, ಶಿಶುನೃತ್ಯ, ಘೋಷ್ ವಾದನ, ಜಡೆಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ, ಪ್ರಾಥಮಿಕ ವಿದ್ಯಾರ್ಥಿಗಳ ಸಾಮೂಹಿಕ ಪ್ರದರ್ಶನ, ನೃತ್ಯ ಭಜನೆ, ಮಲ್ಲಕಂಬ, ಘೋಷ್‌ಟಿಕ್‌ಟಿಕ್ ಪ್ರದರ್ಶನ, ನೃತ್ಯ ವೈವಿಧ್ಯ, ದ್ವಿಚಕ್ರ-ಏಕಚಕ್ರಸಮತೋಲನ, ಬೆಂಕಿ ಸಾಹಸ, ಕೇರಳದ ಚೆಂಡೆ ವಾದ್ಯ, ಕಾಲ್ಚಕ್ರ, ಕೂಪಿಕಾ ಸಮತೋಲನ, ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ರಾಷ್ಟ್ರೀಯಭಾವೈಕ್ಯತೆಯನ್ನು ಸಾರುವಆಕರ್ಷಕ ಸಾಮೂಹಿಕ ರಚನೆಯ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ ಎಂದು ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವಿಶೇಷ ಗ್ಯಾಲರಿ, ಆಸನ ವ್ಯವಸ್ಥೆ:

ಕಾರ್‍ಯಕ್ರಮವನ್ನು ವೀಕ್ಷಿಸುವುದಕ್ಕಾಗಿ ವಿಶೇಷ ಗ್ಯಾಲರಿ ಹಾಗೂ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಲಹೆಗಾರ ಡಾ.ಆರ್ ಸಿ.ಸಿನ್ಹ, ತ್ರಿಪಾಠಿ ಗ್ರೂಪ್ಸ್ ನವದೆಹಲಿಯ ಮಿಥಿಲೇಶ್ ಕುಮಾರ್ ತ್ರಿಪಾಢಿ, ಬಾಮನ್ ಕೆ.ಮೆಹ್ತಾ ಮುಂಬೈ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ, ಉದ್ಯಮಿ ನಿತ್ಯಾನಂದ ಭಂಡಾರಿ, ಮುಂಬೈನ ಡಿ.ಎಸ್.ಚಂದವರ್‍ಕಾರ್, ವಿನೋದ್‌ಎಸ್. ವ್ಯಾಸ ಮುಂಬಯಿ, ಆನಂದ ಶೆಟ್ಟಿ, ಉದ್ಯಮಿಗಳು ಮುಂಬಯಿ, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೆ, ಮ್ಯಾನೇಜಿಂಗ್ ಡೈರಕ್ಟರ್ ಥೋಮ್ಸನ್ ಮುಂಬಯಿಯ ಅಶೋಕ್ ಶೆಟ್ಟಿ, ಸಿ. ಸತ್ಯನಾರಾಯಣ ರೆಡ್ಡಿ ಹೈದರಾಬಾದ್, ನ್ಯಾಚುರಲ್ ಐಸ್ ಕ್ರೀಮ್‌ನ ರಾಘವೇಂದ್ರ ಕಾಮತ್, ಠಾಣೆ ವಿಹಿಂಪ ಅಧ್ಯಕ್ಷ ಉಮೇಶ್ ಶೆಟ್ಟಿ ಪೋಳ್ಯ, ಉಪಲೋಕಾಯುಕ್ತ ಸುಭಾಷ್ ಬಿ. ಆಡಿ, ರವಿಂದ್ರ ಪೈ ಬೆಂಗಳೂರು, ಶಾಸಕರಾದ ಸಂಜಯ ಬಿ ಪಾಟೀಲ್, ಶಶಿಕಲಾ ಎ ಜೊಲ್ಲೆ, ಅರವಿಂದ ಬೆಲ್ಲದ ದಾರವಾಡ, ಸೋಮಶೇಖರ ರೆಡ್ಡಿ ಬಳ್ಳಾರಿ ನಗರ, ರಾಜು ಕಾಗೆ ಬೆಳಗಾಮ್, ಮುನಿರಾಜು ಬೆಂಗಳೂರು, ಕರ್ನಾಟಕ ಪ್ರದೇಶ ಹೋಟೆಲ್, ರೆಸ್ಟೋರೆಂಟ್ ಅಸೋಸಿಯೇಶ್ ಅಧ್ಯಕ್ಷ ಎಂ.ರಾಜೇಂದ್ರ, ವಿದ್ಯಾಭಾರತಿ ಖೇಲ್ ಪರಿಷತ್ ಅಧ್ಯಕ್ಷ ವೇಲಾಯುಧನ್ ಕುಟ್ಟಿ, ಸಂಘಟನಾ ಕಾರ್‍ಯದರ್ಶಿ ವಿದ್ಯಾಭಾರತಿ ದಕ್ಷಿಣ ಕ್ಷೇತ್ರ ಎ.ಸಿ ಗೋಪಿನಾಥನ್ ಭಾಗವಹಿಸುವರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts