ಸಿನಿಮಾ

ನರಹರಿ ಪರ್ವತದಲ್ಲಿ ದಗಲ್‌ಬಾಜಿಗಳ ಲಗ್ಗೆ

www.bantwalnews.com

news by – M.N.Kumar, Melkar


ಸಾವಿರ ಅಡಿ ಎತ್ತರದ, ಭೂಲೋಕದ ಕೈಲಾಸವೆಂದೇ ಜನಜನಿತವಾದ ನರಹರಿ ಪರ್ವತವನ್ನೂ ಏರಿ ತಮ್ಮ ದಗಲ್‌ಬಾಜಿತನವನ್ನು ಪ್ರದರ್ಶಿಸುತ್ತಿದ್ದಾರೆ ಇವರು.

ಇದು ರಿಯಲ್ ಅಲ್ಲ, ಇದೊಂದು ರೀಲ್‌ನ ಕ್ಲೈಮ್ಯಾಕ್ಸ್. ದಗಲ್‌ಬಾಜಿ ತುಳು ಚಿತ್ರ ತಂಡು ನರಹರಿ ಪರ್ವತದಲ್ಲಿ ಸೆಟ್‌ಹಾಕಿ ಮದುವೆಯ ದೃಶ್ಯವುಳ್ಳ ಸಿನಿಮಾ ಕ್ಲೈಮ್ಯಾಕ್ಸ್ ಅನ್ನು ಚಿತ್ರಿಸಿಕೊಂಡರು.

ಭಾರೀ ಹೊಡೆದಾಟದ ದೃಶ್ಯವನ್ನು ಪರ್ವತದ ತುತ್ತ ತುದಿಯಲ್ಲಿ ಚಿತ್ರೀಕರಿಸಲಾಯಿತು.

ಸಾಹಸ ನಿರ್ದೆಶಕ ಉಗ್ರಂ ಖ್ಯಾತಿಯ ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನದಲ್ಲಿ ಮೈ ನವಿರೇಳಿಸುವ ಸಾಹಸ ದೃಶ್ಯಗಳನ್ನು, ಛಾಯಾಗ್ರಾಹಕ ಕೆ.ಎಂ.ವಿಷ್ಣುವರ್ಧನ್ ಚಿತ್ರಿಕರಿಸುತ್ತಿದ್ದು ಚಿತ್ರದಲ್ಲಿ ನಟ ವಿಘ್ನೇಶ್, ಸುರೇಶ್ ಅಂಚನ್, ನಾಯಕಿ ರಶ್ಮಿಕಾ ಹಾಗೂ ತುಳುನಾಡಿನ ದಿಗ್ಗಜರುಗಳಾದ ನವೀನ್. ಡಿ .ಪಡೀಲ್, ಅರವಿಂದ್ ಬೊಳಾರು. ಬೋಜರಾಜ್ ವಾಮಂಜೂರು, ಸತೀಶ್ ಬಂದಲೆ, ದೀಪಕ್ ರೈ ಪಾಣಾಜೆ, ಪ್ರಕಾಶ್ ತೂಮಿನಾಡ್, ಉಮೇಶ್ ಮಿಜಾರ್ ಮೊದಲಾದವರಿದ್ದಾರೆ.

ಸುನೀಲ್ ನೆಲ್ಲಿಗುಡ್ಡೆ, ಚಂದ್ರಶೇಖರ್ ಸಿದ್ದಕಟ್ಟೆ, ರೂಪ ವರ್ಕಾಡಿ, ಪ್ರಿಯ ಹೆಗ್ಡೆ ಚಿತ್ರೀಕರನದಲ್ಲಿ ಭಾಗವಹಿಸಿದ್ದರು. ಕಥೆ ,ಚಿತ್ರಕಥೆ ,ಸಂಭಾಷಣೆ, ಸಾಹಿತ್ಯ ಸುರೇಶ್ ಅಂಚನ್ ಅವರದ್ದು. ಈ ಚಿತ್ರದ ನಿರ್ದೇಶಕರು ವಿ.ಎಸ್ ಪ್ರಶಾಂತ್. ಚಿತ್ರದ ನಿರ್ಮಾಪಕರು ಸಂತೋಷ್ ಶೆಟ್ಟಿ ಕುಂಬ್ಲೆ. ಸಂಗೀತ ಆರ್.ಡಿ.ವರ್ಮನ್ ಮತ್ತು ಸಂದೇಶ ಬಾಬು ಅವರು ನೀಡಿದ್ದಾರೆ.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts