ಬಂಟ್ವಾಳ

ಪಕ್ಕಾ ಆಗದ ಬ್ಯಾಲೆನ್ಸ್, ಕಾರ್ಮಿಕರಿಗಿಲ್ಲ ಭದ್ರತೆ – ಪುರಸಭೆಯಲ್ಲಿ ಕಾವೇರಿದ ಚರ್ಚೆ

www.bantwalnews.com

ಪಾಲನಾ ವರದಿ ಮಂಜೂರಾತಿ, ಕಸ ವಿಲೇವಾರಿ ಗುತ್ತಿಗೆ ಕಾರ್ಮಿಕರಿಗೆ ಇಲ್ಲದ ಸೌಲಭ್ಯ, ಮಫತ್ ಲಾಲ್ ಲೇಔಟ್ ಗೊಂದಲ ಇದು ಈ ಬಾರಿಯ ಬಂಟ್ವಾಳ ಪುರಸಭಾ ಸಾಮಾನ್ಯ ಸಭೆಯಲ್ಲಿ ಚರ್ಚೆಗೀಡಾದ ವಿಷಯಗಳು. ಬಿಜೆಪಿ ಸದಸ್ಯರು ಆಡಳಿತದ ಕಾರ್ಯವೈಖರಿಯನ್ನು ಟೀಕಿಸಿದರೆ, ಆಡಳಿತ ಪಕ್ಷ ತಮ್ಮ ನಡೆಯನ್ನು ಸಹಜವಾಗಿಯೇ ಸಮರ್ಥಿಸಿತು. ಒಟ್ಟಾರೆಯಾಗಿ ಕೊನೆಯಲ್ಲಿ ಯಾವುದೇ ಮಹತ್ವದ ನಿರ್ಣಯಗಳಾಗದೆ ಪುರಸಭೆ ಮೀಟಿಂಗ್ ಕೊನೆಗೊಂಡಿತು.

ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ವಾಸು ಪೂಜಾರಿ, ಮುಖ್ಯಾಧಿಕಾರಿ ರೇಖಾ ಶೆಟ್ಟಿ ವೇದಿಕೆಯಲ್ಲಿದ್ದರು. ಸದಸ್ಯರಾದ ಬಿ.ಮೋಹನ್, ಗಂಗಾಧರ್, ಪ್ರವೀಣ್, ಜಗದೀಶ್ ಕುಂದರ್,ಮಹಮ್ಮದ್ ಶರೀಫ್, ಭಾಸ್ಕರ ಟೈಲರ್, ಮೊನೀಷ್ ಆಲಿ, ಇಕ್ಬಾಲ್, ಸುಗುಣ ಕಿಣಿ, ಚಂಚಲಾಕ್ಷಿ ಮೊದಲಾದವರು ವಿವಿಧ ಚರ್ಚೆಯಲ್ಲಿ ಪಾಲ್ಗೊಂಡರು.

ಇಂದು ಏನಾಯಿತು… ಇಲ್ಲಿದೆ ಪಾಯಿಂಟ್ಸ್..

ಪಾಲನಾ ವರದಿಗೆ ಮಂಜೂರಾತಿ ನೀಡುವ ಸಂದರ್ಭ ಕಳೆದ ಬಾರಿ ಆದ ಲೋಪದಿಂದ ನಷ್ಟವಾಗಿದೆ ಎಂಬುದು ಗಮನದಲ್ಲಿರಲಿ ಎಂದರು ಸದಸ್ಯ ದೇವದಾಸ ಶೆಟ್ಟಿ.

2015-16 ನೇ ಸಾಲಿನ ಲೆಕ್ಕಪರಿಶೋಧಕರ ವರದಿಗೆ ತಯಾರಿಸಿದ ಪಾಲನಾ ವರದಿಗೆ ಮಂಜೂರಾತಿ ನೀಡುವ ಸಂದರ್ಭ 14-15 ಹಾಗೂ 15-16 ನೇ ನೇ ಸಾಲಿನಲ್ಲಿ ಪುರಸಭೆಯಿಂದಾಗಿರುವ ಲೋಪದಿಂದಾಗಿ ನಷ್ಟವಾಗಿದೆ ಎಂದರು ಶೆಟ್ಟಿ.  ಕಟ್ಟಡ,ಅಂಗಡಿ,ನೀರು, ಜಾಹೀರಾತು ಶುಲ್ಕ,ತೆರಿಗೆ ಸೇರಿದಂತೆ ಒಟ್ಟಾರೆಯಾಗಿ ಲಕ್ಷಾಂತರ ರೂ.ವಸೂಲಿಗೆ ಬಾಕಿ ಇರುವುದಲ್ಲದೆ,ಪುರಸಭೆಯ ಆರ್ಥಿಕ ಪರಿಸ್ಥಿತಿಯೇ ತೃಪ್ತಿದಾಯಕವಾಗಿಲ್ಲ ಎಂಬ ವರದಿಯನ್ನು ಲೆಕ್ಕಪರಿಶೋಧಕರು ಸಲ್ಲಿಸಿರುವುದನ್ನು ಸಭೆಯ ಗಮನ ಸೆಳೆದು ಇದರ ಕ್ರಮಕ್ಕೆ ಆಗ್ರಹಿಸಿದರು.

ಕಸ ವಿಲೇವಾರಿಗೆ ಸಂಬಂಸಿ ಗುತ್ತಿಗೆದಾರ ಮನೆ, ಮನೆಯಿಂದ ಹಣ ವಸೂಲಿ ಮಾಡಿ ಪುರಸಭೆಗೆ ಅದರ ಲೆಕ್ಕವನ್ನೇ ನೀಡದಿರುವುದಿರುವುದರಿಂದ ದುರುಪಯೋಗಕ್ಕೆ ಕಾರಣವಾಗುತ್ತಿದೆ ಎಂದು ಲೆಕ್ಕ ಪರಿಶೋಧಕರು ತಮ್ಮ ವರದಿಯಲ್ಲಿ ಉಲ್ಲೇಖಿಸಿರುವುದನ್ನು ಸಭೆಯ ಗಮನಸೆಳೆದ ದೇವದಾಸ ಶೆಟ್ಟಿ,ಈ ಹಿಂದಿನ ಸಭೆಯಲ್ಲಿ ಚರ್ಚೆಯ ವೇಳೆ ತಾವು ಆಕ್ಷೇಪಿಸಿರುವುದನ್ನು ನೆನಪಿಸಿದರು.

ಮುಂದಿನ ದಿನಗಳಲ್ಲಿ ಪಾಲನಾ ವರದಿಯಲ್ಲಿ ಲೋಪವಾಗದಂತೆ ನೋಡಿಕೊಳ್ಳಲಾಗುವುದು ಎಂದು ಮುಖ್ಯಾಕಾರಿ ರೇಖಾ ಶೆಟ್ಟಿ ಭರವಸೆ ನೀಡಿದರು.

ಕಾರ್ಮಿಕರಲ್ಲಿ ಪಿಯುಸಿ ಓದಿದವರು ಇದ್ದಾರೆ,ಹೊಟ್ಟೆಪಾಡಿಗಾಗಿ ಬಂದ ಕಾರ್ಮಿಕರನ್ನು ಈ ರೀತಿ ಜೀತದಾಳುವಂತೆ ದುಡಿಸುವುದು ಆಡಳಿತ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಕಸ ವಿಲೇವಾರಿ ಕಾರ್ಮಿಕರ ಸಂಕಷ್ಟ ಬಗ್ಗೆ ದೇವದಾಸ ಶೆಟ್ಟಿ ವಿವರಿಸಿದರು.

ಕಾರ್ಮಿಕರಿಗೆ ಗುರುತಿನಚೀಟಿ ನೀಡವ ಭಾಗ್ಯ ಪುರಸಭೆಗಿಲ್ಲ, ಮನೆ, ಮನೆಯಿಂದ 30 ರೂ.ಬದಲು  50 ರೂ.ವಸೂಲಿ ಬಗ್ಗೆ ದೂರು ಕೊಟ್ಟರೂ ಕ್ರಮ ಕೈಗೊಂಡಿಲ್ಲ ಎಂದರು ಗೋವಿಂದ ಪ್ರಭು.

ಕಾರ್ಮಿಕರ ಶಾಪ ಪುರಸಭೆಗೆ ಬೇಡ ಈ ಬಗ್ಗೆ ಗಂಭೀರವಾಗಿ ಪರಿಗಣಿಸುವಂತೆ ಸದಸ್ಯರಾದ ಮೊನೀಷ ಆಲಿ,ಇಕ್ಬಾಲ್ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ರಾಮಕೃಷ್ಣ ಆಳ್ವ ಅವರು ಈವಿಚಾರ ನನ್ನ ಗಮನಕ್ಕೂ ಬಂದಿದೆ ಎಂದರು.

ಬಿ.ಮೂಡ ಗ್ರಾಮದ ಮಫತ್ ಲಾಲ್ ಲೇಔಟ್ ಬಳಿ ನಡೆದ ಕಾಮಗಾರಿಗೆ ಸಂಬಂಸಿ ಗುತ್ತಿಗೆದಾರನಿಗೆ ಹಣ ಪಾವತಿ ತಡೆ ಹಿಡಿಯುವಂತೆ ಯೋಜನಾ ನಿರ್ದೇಶಕರು ಹೊರಡಿಸಿದ್ದ ಆದೇಶವನ್ನು ದಿಕ್ಕರಿಸಿ ಹಣ ಪಾವತಿಸಿರುವ ಬಗ್ಗೆ ಸದಸ್ಯರಾದ ದೇವದಾಸ ಶೆಟ್ಟಿ, ಗೋವಿಂದ ಪ್ರಭು ಆಕ್ಷೇಪ ವ್ಯಕ್ತ ಪಡಿಸಿದರು. ಈ ವಿಚಾರದಲ್ಲಿ ಸದಸ್ಯರಾದ ಶರೀಫ್ ಹಾಗೂ ಗೋವಿಂದ ಪ್ರಭ ಮಧ್ಯೆ ಮಾತಿನ ಚಕಮಕಿಯು ನಡೆಯಿತು.

ಬುಡಾ ಅಧ್ಯಕ್ಷ ಸದಾಶಿವ ಬಂಗೇರ ಚರ್ಚೆಯಲ್ಲಿ ಪಾಲ್ಗೊಂಡರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts