www.bantwalnews.com
ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಬೆಂಗಳೂರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮೈಸೂರು ಇವರ ಸಹಯೋಗದಲ್ಲಿ ಮೈಸೂರಿನ ಅವಿಲ್ ಕಾನ್ವೆಂಟ್ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ಮಾದರಿಯ “ಆರೋಗ್ಯ ಮತ್ತು ಕ್ಷೇಮ” ವಿಭಾಗದಲ್ಲಿ ಬಂಟ್ವಾಳ ಎಸ್‌ವಿಎಸ್ ದೇವಳ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ .ಸುಪ್ರಿಯಾ ಮತ್ತು ವರ್ಷಾ ಇವರು ಪ್ರಥಮ ಸ್ಥಾನ ಪಡೆದು, ಹೈದರಾಬಾದ್‌ನಲ್ಲಿ ನಡೆಯುವ ದಕ್ಷಿಣ ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
ಶಾಲೆಗೆ ಕೀರ್ತಿ ತಂದ ಈ ಇಬ್ಬರು ಸಾಧಕಿ ವಿದ್ಯಾರ್ಥಿನಿಯರನ್ನು ಡಿ. 12ರಂದು ಬೆಳಿಗ್ಗೆ ಬಂಟ್ವಾಳ ಶ್ರೀತಿರುವಲ ವೆಂಕಟರಮಣ ದೇವಳದ ವಠಾರದಿಂದ ಮೆರವಣಿಗೆಯ ಮೂಲಕ ಶಾಲೆಗೆ ಕರೆತರಲಾಗುವುದು ಎಂದು ಶಾಲಾ ಸಂಚಾಲಕ ಗೋವಿಂದ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.