ಮಗನ ಮದುವೆಯ ಜೊತೆಗೆ ಸಾಹಿತ್ಯದ ಸಂಭ್ರಮವೂ ಜೊತೆಗೂಡಿದರೆ ಹೇಗಿರುತ್ತದೆ?
ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದಲ್ಲಿರುವ ಬಂಟ್ವಾಳನ್ಯೂಸ್ ಅಂಕಣಕಾರ್ತಿಯೂ ಆಗಿರುವ ನಾಡಿನ ಪ್ರಮುಖ ಲೇಖಕಿ ಅನಿತಾ ನರೇಶ್ ಮಂಚಿ ಅವರು ಬರೆದ ಮೊದಲ ಕಾದಂಬರಿ ಪದ ಕುಸಿಯೇ ನೆಲವಿಹುದು ಬಿಡುಗಡೆ ಲೇಖಕಿಯ ಪುತ್ರನ ವಿವಾಹ ಸಮಾರಂಭದಲ್ಲಿ ಮಂಚಿ ಮನೆಯಂಗಳದಲ್ಲಿ ನಡೆಯಿತು.
ಮದುಮಕ್ಕಳಾದ ಚೇತನ್ ಮತ್ತು ಸ್ವಾತಿ ಪುಸ್ತಕ ಬಿಡುಗಡೆ ಮಾಡಿದರು. ಈ ಸಂದರ್ಭ ಅನಿತಾ ಅವರ ಪತಿ ರಾಮ್ ನರೇಶ್ ಮಂಚಿ ಉಪಸ್ಥಿತರಿದ್ದರು.
ಬೆಂಗಳೂರಿನ ತೇಜು ಪಬ್ಲಿಕೇಷನ್ ಪ್ರಕಟಿಸಿದ ಕಾದಂಬರಿ ಇದಾಗಿದ್ದು, ಹೆಣ್ಣೊಬ್ಬಳ ಬದುಕಿನ ಹೋರಾಟದ ಹಾದಿ ಇದರಲ್ಲಿ ಚಿತ್ರಿತಗೊಂಡಿದೆ. ನೈಜ ಬದುಕನ್ನಾಧರಿಸಿ ಬರೆದ ಕಥೆಯಿದು. ದ . ಕ. ಜಿಲ್ಲೆಯ ಹಿನ್ನೆಲೆಯಲ್ಲಿ ಮೂಡಿ ಬಂದ ಈ ಕಥೆ ಸುಮಾರು ಐವತ್ತು ವರ್ಷಗಳ ಹಿಂದೆ ಒದುಗರನ್ನು ಎಳೆದೊಯ್ಯುತ್ತದೆ.