ಮಾಸಾಂತ್ಯದಲ್ಲಿ ಪೊಲೀಸ್ ಇಲಾಖೆಯಿಂದ ನಡೆಯುವ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ಪತ್ರಕರ್ತರ ಸಂಘ ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಂಡಿರುವ ವಿಚಾರಣಾಧೀನ ಕೈದಿಗಳ ಆರೋಗ್ಯ ತಪಾಸಣಾ ಕಾರ್ಯಕ್ರಮ ಒಂದು ಉತ್ತಮ ಸೇವೆಯಾಗಿದೆ ಎಂದು ಮಂಗಳೂರು ಡಿಸಿಪಿ ಹನುಮಂತರಾಯ್ ಹೇಳಿದರು.
ಕರ್ನಾಟಕ ಪತ್ರಕರ್ತರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವತಿಯಿಂದ ಮಂಗಳೂರು ಕೇಂದ್ರ ಕಾರಾಗೃಹದಲ್ಲಿ ಶನಿವಾರ ನಡೆದ ವಿಚಾರಣಾಧೀನ ಕೈದಿಗಳ ಆರೋಗ್ಯ ತಪಾಸಣಾ ಶಿಬಿರ “ಸುಹಾಸ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜೈಲು ಅಧೀಕ್ಷಕ ಪರಮೇಶ, ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಷಾ, ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಎಸ್. ಚಂಗಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್, ಉಪಾಧ್ಯಕ್ಷ ಶಿವಶರಣ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಐಸಾಕ್ ರಿಚಾರ್ಡ್, ಕೋಶಾಧಿಕಾರಿ ಬಾವಾ ಪದರಂಗಿ, ಸದಸ್ಯರುಗಳಾದ ಹೊನ್ನಯ್ಯ ಕಾಟಿಪಳ್ಳ, ಸದಾನಂದ ಸುವರ್ಣ, ಲತೀಫ್ ನೇರಳಕಟ್ಟೆ, ಮೋಹನ್ ಕೆ. ಶ್ರೀಯಾನ್, ಜಬ್ಬಾರ್ ಮಲ್ಲೂರು, ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಯು. ಮುಸ್ತಫಾ ಆಲಡ್ಕ, ಇಜಾಝ್ ಮೇರಮಜಲು, ಅಬೂಬಕ್ಕರ್ ಕೈರಂಗಳ, ಮುಹಮ್ಮದ್ ರಫೀಕ್, ಮೊಯಿದಿನ್, ಎಜೆ ಆಸ್ಪತ್ರೆಯ ಡಾ. ಶಭನ್ ಆಳ್ವ, ಡಾ. ನಿತಿನ್ ಮತ್ತು ಸಿಬ್ಬಂದಿ ವರ್ಗ, ಕೆ.ಎಂ.ಸಿ. ಆಸ್ಪತ್ರೆಯ ಡಾ. ವಿದ್ಯಾ ಸುರೇಶ್, ಡಾ. ಮಂಜುನಾಥ್, ಡಾ. ಗೌರವ್, ಡಾ. ಅಫ್ಝಾ ಮೊದಲಾದವರು ಭಾಗವಹಿಸಿದ್ದರು. ಬಳಿಕ ಕೈದಿಗಳ ಆರೋಗ್ಯ ತಪಾಸಣೆ ನಡೆಯಿತು.