ಕರ್ನಾಟಕ ಸ್ಟೇಟ್ ಎಂಪ್ಲೋಯೀಸ್ ಅಸೋಸಿಯೇಶನ್ ಹಾಲ್ ಹಂಪನ್ ಕಟ್ಟೆ ಮಂಗಳೂರಿನಲ್ಲಿ ನಡೆದ 2017ನೇ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಶ್ರೀ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನವನ್ನು ಗಳಿಸಿದ್ದಾರೆ.
ವೈಯಕ್ತಿಕ ಕಟಾದಲ್ಲಿ ಸೋನಲ್ ಅಡಪ್ಪ, ಅಕ್ಷತಾ ಕೆ, ಲೈಝಿಲ್ ಫ್ರ್ಯಾಂಕಿ ಡಿ’ ಸೋಜ, ಆಭಯಕೃಷ್ಣ ತಾಳಿತ್ತಾಯ, ಶ್ರೀಶ ಕೃಷ್ಣ ಒ, ಪೂಜಿತ್ ಕುಮಾರ್, ಅಕ್ಷಯ ಕೃಷ್ಣ ಪ್ರಥಮ ಸ್ಥಾನ, ರಕ್ಷಿತಾ, ಚಿರಂಜನ್ ದ್ವಿತೀಯ ಸ್ಥಾನ ಹಾಗೂ ಸನ್ಮಯಾ ಐ.ಕೆ, ಅಭಿಷೇಕ್ ಕೆ ಭಟ್, ಕಾರ್ತಿಕ್ ಎಮ್, ಪ್ರೀತಮ್ ಕೃಷ್ಣ, ಕೆ.ಎಸ್ ಸಾಕ್ಷತ್ ಶೆಟ್ಟಿ, ಅಮೃತವರ್ಷಿಣಿ ಎಮ್ ತೃತೀಯ ಸ್ಥಾನ ಮತ್ತು ವೈಯಕ್ತಿಕ ಕುಮಿಟೆಯಲ್ಲಿ ಸೋನಲ್ ಅಡಪ್ಪ, ಅಕ್ಷತಾ ಕೆ ಪ್ರಥಮ ಸ್ಥಾನ, ಅಭಿಷೇಕ್ ಕೆ ಭಟ್ ದ್ವಿತೀಯ ಸ್ಥಾನ ಹಾಗೂ ಲೈಝಿಲ್ ಫ್ರ್ಯಾಂಕಿ ಡಿ’ ಸೋಜ, ಕಾರ್ತಿಕ್ ಎಮ್, ಕೆ. ಎಸ್ ಸಾಕ್ಷತ್ ಶೆಟ್ಟಿ, ಪ್ರೀತಮ್ ಕೃಷ್ಣ ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ಅವರಿಗೆ ಕರಾಟೆ ಶಿಕ್ಷಕ ಸತೀಶ್ ಕೇಪುರವರು ತರಬೇತಿ ನೀಡುತ್ತಿದ್ದಾರೆ.
ಅವರಿಗೆ ಶಾಲಾ ಸಂಚಾಲಕರಾದಈಶ್ವರ ಪ್ರಸಾದ್, ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಮಧುರಾ ಐ ಪ್ರಸಾದ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಲವೀನಾ ಮೊಂತೇರೋ, ಶಿಕ್ಷಕ ವೃಂದ, ಹಾಗೂ ವಿದ್ಯಾರ್ಥಿ ವೃಂದದವರು ಶುಭ ಹಾರೈಸಿದ್ದಾರೆ.