ಬಿ.ಸಿ.ರೋಡ್ ಸಹಿತ ಬಂಟ್ವಾಳ ತಾಲೂಕಿನಾದ್ಯಂತ ವ್ಯಕ್ತಿತ್ವವಿಕಸನ, ತರಬೇತಿ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವುದರ ಮೂಲಕ ಜನಪರ ಹಾಗೂ ಜನಪ್ರಿಯವಾಗಿದ್ದ ಜೋಡುಮಾರ್ಗ ನೇತ್ರಾವತಿ ಜೇಸಿ ಮತ್ತೆ ಕಾರ್ಯೋನ್ಮುಖವಾಗಲಿದೆ.
ಮಂಗಳೂರು ಜೇಸಿ ಸಾಮ್ರಾಟ್ ಅಧ್ಯಕ್ಷ ರಾಘವೇಂದ್ರ ಹೊಳ್ಳ ನೇತೃತ್ವದಲ್ಲಿ ಜೋಡುಮಾರ್ಗ ಜೇಸಿಯ ಎಲ್ಲ ಪೂರ್ವ ಸದಸ್ಯರನ್ನು ಒಗ್ಗೂಡಿಸಿ, ಹೊಸ ಸದಸ್ಯರ ಸೇರ್ಪಡೆಯೊಂದಿಗೆ ಡಿಸೆಂಬರ್ 10ರಂದು ಸಂಜೆ 6.30ಕ್ಕೆ ಬಿ.ಸಿ.ರೋಡಿನ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಪದಗ್ರಹಣ ಕಾರ್ಯಕ್ರಮ ನಡೆಯಲಿದೆ. ನೂತನ ಅಧ್ಯಕ್ಷರಾಗಿ ಸವಿತಾ ನಿರ್ಮಲ್ ಆಯ್ಕೆಗೊಂಡಿದ್ದಾರೆ. ಕಾರ್ಯದರ್ಶಿಯಾಗಿ ಅಜಿತ್ ಜಿ. ಜೋಷಿ, ಜೊತೆ ಕಾರ್ಯದರ್ಶಿಯಾಗಿ ತಪೋಧನ್ ಶೆಟ್ಟಿ, ಕೋಶಾಧಿಕಾರಿಯಾಗಿ ನವೀನ್ ಚಂದ್ರ ಶೆಟ್ಟಿ, ಉಪಾಧ್ಯಕ್ಷರಾಗಿ ಚೇತನ್ ಮುಂಡಾಜೆ, ಸತ್ಯನಾರಾಯಣ ರಾವ್, ಶುಭ ಆನಂದ ಬಂಜನ್, ಹರಿಪ್ರಸಾದ್, ಧೀರಜ್, ನಿರ್ದೇಶಕರಾಗಿ ಹರ್ಷರಾಜ್ ಸಿ, ವಸಂತ್, ಹರೀಶ ಮಾಂಬಾಡಿ, ಕೃಷ್ಣರಾಜ್ ಭಟ್, ಮೊಹಮ್ಮದ್ ಪಿ, ಸಲಹೆಗಾರರಾಗಿ ಬಿ.ರಾಮಚಂದ್ರ ರಾವ್, ವೃಷಭರಾಜ ಜೈನ್, ಜಯಾನಂದ ಪೆರಾಜೆ, ಜ್ಯೋತೀಂದ್ರಪ್ರಸಾದ್ ಶೆಟ್ಟಿ, ರಾಮದಾಸ ಬಂಟ್ವಾಳ, ಉಮೇಶ್ ನಿರ್ಮಲ್ ಹಾಗೂ ಅಹಮದ್ ಮುಸ್ತಫಾ ಆಯ್ಕೆಗೊಂಡಿದ್ದಾರೆ ಎಂದು ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಜೇಸಿ ಮಂಗಳೂರು ಸಾಮ್ರಾಟ್ ಅಧ್ಯಕ್ಷ ರಾಘವೇಂದ್ರ ಹೊಳ್ಳ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ಜೇಸಿ ವಲಯಾಧ್ಯಕ್ಷ ರಾಕೇಶ್ ಕುಂಜೂರು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜೇಸಿ ವಲಯ ಉಪಾಧ್ಯಕ್ಷ ಪಶುಪತಿ ಶರ್ಮಾ, ಬಂಟ್ವಾಳ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ತಹಶೀಲ್ದಾರ್ ಪುರಂದರ ಹೆಗ್ಡೆ ಹಾಗೂ ಜೇಸಿ ಇಂಡಿಯಾ ಫೌಂಡೇಶನ್ ನಿರ್ದೇಶಕ ವೈ. ಸುಕುಮಾರ್ ಭಾಗವಹಿಸುವರು ಎಂದು ಅವರು ತಿಳಿಸಿದರು.
ಜೇಸಿ ಮಂಗಳೂರು ಸಾಮ್ರಾಟ್ ಈ ಘಟಕವನ್ನು ಪ್ರಾಯೋಜಿಸಲಿದ್ದು, ಬಳಿಕ ಜೋಡುಮಾರ್ಗ ನೇತ್ರಾವತಿ ಜೇಸಿ ವ್ಯಕ್ತಿತ್ವ ವಿಕಸನ, ತರಬೇತಿ ಹಾಗೂ ಹಲವು ಸಮಾಜಮುಖಿ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಕ್ರಿಯಾಶೀಲವಾಗಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೇಸಿ ಜೋಡುಮಾರ್ಗ ನೇತ್ರಾವತಿಯ ನಿಯೋಜಿತ ಅಧ್ಯಕ್ಷೆ ಸವಿತಾ ನಿರ್ಮಲ್, ಕಾರ್ಯದರ್ಶಿ ಅಜಿತ್ ಜಿ.ಜೋಷಿ, ಜೇಸಿ ಸಾಮ್ರಾಟ್ ಜತೆಕಾರ್ಯದರ್ಶಿ ಉಮೇಶ್ ನಾಗನವಳಚ್ಚಿಲ್, ಜೇಸಿ ಪೂರ್ವಾಧ್ಯಕ್ಷ ಉಮೇಶ್ ನಿರ್ಮಲ್, ಸಾಮ್ರಾಟ್ ಜೇಸಿಯ ಹರಿಕೃಷ್ಣ ಅಡಿಗ, ಮಹೇಶ್ ಮಯ್ಯ ಮತ್ತು ಅನನ್ಯ ಜೋಷಿ ಉಪಸ್ಥಿತರಿದ್ದರು.