ತುಳು ಭಾಷೆ, ಸಂಸ್ಕ್ರತಿ, ಆಚಾರ, ವಿಚಾರ ಮತ್ತು ತುಳುವಿಗೆ ಸಂಬಂಧಿಸಿದ ಆಟೋಟಗಳ ಉಳಿವಿಗೆ ಮತ್ತು ಮುಂದಿನ ಪೀಳಿಗೆಗೆ ಪರಿಚಯಿಸುವ ಮುಖಾಂತರ ತುಳು ಭಾಷೆ ಬೆಳವಣಿಗೆಗೆ ಪೂರಕವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮುಂದಾಳತ್ವದಲ್ಲಿ ಡಿಸೆಂಬರ್ 10ರಂದು ಆದಿತ್ಯವಾರ ಬಂಟ್ವಾಳದ ಬಿ.ಸಿ.ರೋಡ್ ಸ್ಪರ್ಶಾ ಕಲಾಮಂದಿರದಲ್ಲಿ ಪ್ರಥಮ ಬಾರಿಗೆ ಬಂಟ್ವಾಳ ತಾಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಎಲ್ಲಾ ತುಳುನಾಡಿನ ಜನತೆ ಭಾಗವಹಿಸುವ ಮುಖಾಂತರ ತುಳು ಭಾಷೆಗೆ ಮೇಲ್ಪಂಕ್ತಿ ಹಾಕುವುದರೊಂದಿಗೆ ತುಳುವ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಬಂಟ್ವಾಳ ತಾಲೂಕು ತುಳು ಸಾಹಿತ್ಯ ಪ್ರಚಾರ ಸಮಿತಿ ಅಧ್ಯಕ್ಷ ಪ್ರಭಾಕರ ಪ್ರಭು ಪತ್ರಿಕಾ ಹೇಳಿಕೆ ಮೂಲಕ ವಿನಂತಿಸಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಅಕಾಡೆಮಿ ರಿಜಿಸ್ಟರ್ ಚಂದ್ರಹಾಸ ರೈ, ಬಂಟ್ವಾಳ ತುಳು ಕೂಟದ ಅಧ್ಯಕ್ಷ ಸುದರ್ಶನ್ ಜೈನ್, ಅಕಾಡೆಮಿ ಸದಸ್ಯ ಎ.ಗೋಪಾಲ ಅಂಚನ್ ಸಹಿತ ಇತರ ಅಕಾಡೆಮಿ ಸದಸ್ಯರ ನೇತೃತ್ವ ಸಮಿತಿಯ ಸಾರಥ್ಯದಲ್ಲಿ ಕಾರ್ಯಕ್ರಮ ನಡೆಯಲಿರುವುದು. ಇದರ ಅಂಗವಾಗಿ ಹಲವು ಸ್ಪರ್ಧೆಗಳು ಇರುತ್ತವೆ.
ಬರವಣಿಗೆ ಸ್ಪರ್ಧೆಗಳ ವಿವರ:
ತುಳು ಗಾದೆ ಬರೆಯುವುದು , ಅಜ್ಜಿ ಕಥೆ ಬರೆಯುವುದು, ಎದುರು ಕಥೆ ಬರೆಯುವುದು
ಆಟೋಟ ಸ್ಪರ್ಧೆಗಳು: ಹುಡುಗರಿಗೆ: ಸೈಕಲ್ ಟಯರ್, ಕಾರ್ ಕಂಬುಲ, ಪಾಲೆ ಬಂಡಿ, ಗೋಲಿ ಗೊಬ್ಬು
ಹುಡುಗಿಯರಿಗೆ : ಜಿಬಿಲಿ, ಕೆರೆದಂಡೆ, ಡೊಂಕಾಟ, ಕಲ್ಲಾಟ, ಗಂಡಸರಿಗೆ: ಉಪ್ಪುಮುಡಿ, ಲಗೋರಿ, ಗೋಣಿ ಚೀರವು, ಹಗ್ಗ ಜಗ್ಗಾಟ, ಹೆಂಗಸರಿಗೆ: ಮುಟಾಲೆ ಪಾಡಿ, ಗೋಣಿ ಚೀರವು, ಲಗೋರಿ, ಹಗ್ಗ ಜಗ್ಗಾಟ, ಹಿರಿಯ ಗಂಡಸರು ಮತ್ತು ಹೆಂಗಸರಿಗೆ (60 ವರ್ಷ ಮೇಲ್ಪಟ್ಟವರಿಗೆ): ವೇಗದ ನಡಿಗೆ
ಎಲ್ಲಾ ಸ್ಪರ್ಧೆಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಬೇಕಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.