ಮಂಚಿ-ಕುಕ್ಕಾಜೆ ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್ ವತಿಯಿಂದ ವಿಠಲ ವಿದ್ಯಾಸಂಘದ ದಶಮಾನದ ಸಲುವಾಗಿ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣರಂಗಮಂದಿರದಲ್ಲಿ ಬಿ.ವಿ ಕಾರಂತರ ನೆನಪಿನ ಅಂತರ ಕಾಲೇಜು ನಾಟಕ ಸ್ಪರ್ಧೆ ’ರಂಗಭೂಮಿಕಾ-2017’ ಡಿ.24 ಮತ್ತು 25 ರಂದು ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ತಿಳಿಸಿದರು.
ಅವರು ವಿಟ್ಲ ಪ್ರಸ್‌ಕ್ಲಬ್‌ನಲ್ಲಿ ನಾಟಕ ಸ್ಪರ್ಧೆಯ ವಿವರ ನೀಡಿದರು. ಡಿ.24 ರಂದು ಬೆಳಗ್ಗೆ 9.30 ಗಂಟೆಗೆ ನಾಟಕ ಸ್ಪರ್ಧೆಯನ್ನು ರಂಗ ನಿರ್ದೇಶಕ ಮೋಹನ್ ಸೋನ ಕಾರ್‍ಯಕ್ರಮ ಉದ್ಘಾಟಿಸಲಿದ್ದಾರೆ. 60 ನಿಮಿಷದ ಅವಧಿಯ ಒಟ್ಟು 10 ನಾಟಕಗಳು ಸ್ಪರ್ಧೆಯಲ್ಲಿ ಪ್ರಸ್ತುತಗೊಳ್ಳಲಿವೆ. ಡಿ.24 ರಂದು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಕುಣಿ ಕುಣಿ ನವಿಲೆ, ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ತಂಡದಿಂದ ಕರುಣಾನಿಧಿ, ಮಂಗಳೂರು ಪದುವಾ ಕಾಲೇಜು ತಂಡದಿಂದ ಕದಡಿದ ನೀರು, ಮಂಗಳೂರು ಬೆಸೆಂಟ್ ಪ್ರ.ದ ಕಾಲೇಜಿನ ಕನಸು, ಸುಬ್ರಹ್ಮಣ್ಯ ಕೆ.ಎಸ್.ಎಸ್.ಕಾಲೇಜು ತಂಡದಿಂದ ಪಂಚವಟಿಯ ಮುಖವಾಡಗಳು ಪ್ರದರ್ಶನಗೊಳ್ಳಲಿದೆ.
ಡಿ.25 ರಂದು ಮುಡಿಪು ಸರಕಾರಿ ಪ್ರ.ದ.ಕಾಲೇಜು ಕಲಾ ತಂಡದಿಂದ ರಂಗೋಲಿ, ಮಂಗಳುರು ಸಂತ ಅಲೋಸಿಯಸ್ ಕಾಲೇಜು ತಂಡದ ಅಗ್ನಿವರ್ಣ, ಮಂಗಳೂರು ಸೈಂಟ್ ಆಗ್ನೇಸ್ ಕಾಲೇಜು ತಂಡದ ನಿನಗೆ ನೀನೇ ಗೆಳತಿ, ಉಜಿರೆ ಎಸ್‌ಡಿಎಂ ಕಾಲೇಜು ತಂಡದ ಮಾರಿಕಾಡು ಹಾಗೂ ಮಂಗಳೂರು ಯುನಿವರ್ಸಿಟಿ ಕಾಲೇಜು ತಂಡದಿಂದ ನೂತನ ನಾಟಕ ಪ್ರದರ್ಶನಗೊಳ್ಳಲಿದೆ. ಸಮಾರೋಪ ಸಮಾರಂಭದಲ್ಲಿ ನಾಟಕ ಅಕಾಡೆಮಿ ಸದಸ್ಯ ಬಾಸುಮ ಕೊಡಗು, ಬಿ.ವಿ.ಕಾರಂತರ ಬಾಲ್ಯದ ಒಡನಾಡಿ ಡಾ.ಕಜೆ ಮಹಾಬಲ ಭಟ್ ಮಂಗಳೂರು ಭಾಗವಹಿಸಿಲಿದ್ದಾರೆ.
ಪ್ರಥಮ ಬಹುಮಾನ 12 ಸಾವಿರ ನಗದು, ದ್ವಿತೀಯ 10 ಸಾವಿರ ನಗದು, ತೃತೀಯ ೮ ಸಾವಿರ ನಗದು, ಪ್ರಶಸ್ತಿಪತ್ರ, ಸ್ಮರಣಿಕೆಗಳನ್ನೊಳಗೊಂಡಿರುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿಕಾ ಸಂಚಾಲಕ ಪ್ರೊ. ಅನಂತಕೃಷ್ಣ ಹೆಬ್ಬಾರ್ ವಿಟ್ಲ, ಸ್ವಾಗತ ಸಮಿತಿ ಅಧ್ಯಕ್ಷ ಸುಬ್ರಾಯ ಪೈ ವಿಟ್ಲ, ಬಿ.ವಿ.ಕಾರಂತ ರಂಗ ಶಾಲೆಯ ಸಂಚಾಲಕ ರಂಗಕರ್ಮಿ ಮೂರ್ತಿ ದೇರಾಜೆ ಉಪಸ್ಥಿತರಿದ್ದರು.