www.bantwalnews.com REPORT
ಬಳ್ಳಾರಿಯ ಬೆಸ್ಟ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ನ.28ರಿಂದ 30ರವರೆಗೆ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಮಗ್ರ ಪ್ರಶಸ್ತಿ ಲಭಿಸಿದೆ ಎಂದು ಜಿಲ್ಲಾ ನೋಡಲ್ ಅಧಿಕಾರಿ ರಾಧಾಕೃಷ್ಣ ಭಟ್ ತಿಳಿಸಿದ್ದಾರೆ.
ಕಲೋತ್ಸವದಲ್ಲಿ ನಾಟಕ ಪ್ರಥಮ, ಸಂಗೀತ ದ್ವಿತೀಯ, ನೃತ್ಯ ತೃತೀಯ ಸ್ಥಾನ ಪಡೆದರೆ, ಪ್ರತಿಭಾ ಕಾರಂಜಿಯಲ್ಲಿ ಭರತನಾಟ್ಯ ಪ್ರಥಮ, ಹಿಂದಿ, ತಮಿಳು, ತೆಲುಗು, ತುಳು ಭಾಷಣ ಪ್ರಥಮ, ಭಾವಗೀತೆ, ಗಝಲ್, ಕೊಂಕಣಿ ಮತ್ತು ಸಂಸ್ಕೃತ ಭಾಷಣ ದ್ವಿತೀಯ ಹಾಗೂ ರಂಗೋಲಿ, ಕನ್ನಡ, ಮರಾಠಿ ಭಾಷಣಗಳಲ್ಲಿ ತೃತೀಯ ಸ್ಥಾನ ಪಡೆಯಿತು.
ಶಂಭೂರು ಶಾಲೆಯ ತಂಡ ರಾಷ್ಟ್ರಮಟ್ಟಕ್ಕೆ:
ಶಂಭೂರು ಹೈಸ್ಕೂಲಿನ ಚಿನ್ನಪ್ಪ ಜಾಲ್ಸೂರು ನಿರ್ದೇಶನದ ಕಿಷ್ಕಿಂಧಾ ಕೌತುಕ ಎಂಬ ನಾಟಕ ಕಲೋತ್ಸವದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಗೊಂಡಿದೆ. ಭೋಪಾಲ್ ನಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆಗಳು ನಡೆಯುತ್ತವೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)