ಜಿಲ್ಲಾ ಸುದ್ದಿ

ವೈಚಾರಿಕತೆಯ ನೆಲೆಗಟ್ಟಿನಲ್ಲಿ ಕೃಷಿಸಿರಿ ಪ್ರದರ್ಶನ

  • ಮಂಜುಶ್ರೀ ಹೆಗ್ಡೆ

www.bantwalnews.com

ಅದು ಸುಮಾರು ಆರು ಎಕರೆ ಮೈದಾನದಲ್ಲಿ ಸೃಷ್ಟಿಯಾದ ವೈಭವ. ಮೈದಾನ ಪ್ರವೇಶಿಸುತ್ತಲೇ ಜಗಧೋದ್ದಾರಕನ ದರ್ಶನ, ಮುಂದೆ ಸಾಗಿದಾಗ ಕಾಣಸಿಗುವುದು ಭತ್ತದಿಂದತಯಾರಾಗಿ ವಿರಾಜಮಾನರಾದ ವಿಘ್ನ ವಿನಾಯಕ, ಸುತ್ತ ಮುತ್ತಲೆಲ್ಲ ಭರದಿಂದ ನಡೆಯುತ್ತಿದ್ದ ಜನರ ಓಡಾಟ, ಬಿಸಿಲಿನ ಬೇಗೆಯಲ್ಲಿಜನರಗೊಣಗಾಟ, ಮಾರಾಟಗಾರ-ಖರೀದಿದಾರರ ನಡುವೆ ಜಂಜಾಟ.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾಪನದಲ್ಲಿ ನಡೆಯುತ್ತಿರುವ ’ಆಳ್ವಾಸ್ ನುಡಿಸಿರಿ-2017’ ಯ ’ಕೃಷಿಸಿರಿ’ಯಲ್ಲಿ ಕಂಡು ಬಂದ ದೃಶ್ಯಗಳಿವು.

ಭಾನುವಾರ ಆಳ್ವಾಸ್ ನುಡಿಸಿರಿಗೆ ತೆರೆ. ಆದರೆ ಆಗಮಿಸಿದ ಸುಮಾರು ಎರಡು ಲಕ್ಷ ಜನರ ಹೃದಯದಲ್ಲಿ ಈ ನೋಟ ಅಚ್ಚಳಿಯದೆ ಉಳಿಯುವುದಂತೂ ಖಂಡಿತ.

ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಇಲಾಖೆ, ಕೃಷಿ ವಸ್ತು ಪ್ರದರ್ಶನ, ಧರ್ಮಸ್ಥಳ ಸಿರಿ ಗ್ರಾಮಾಭಿವೃದ್ಧಿ ಯೋಜನೆ ಸೇರಿದಂತೆ ಸುಮಾರುಇನ್ನೂರ ಎಂಬತ್ತಕ್ಕು ಹೆಚ್ಚಿನ ಅಂಗಡಿ ಮಳಿಗೆಗಳು ಜಾಗ ಹೂಡಿದ್ದು ನೆರೆದ ಜನರನ್ನುಆಕರ್ಷಿಸುತ್ತಿವೆ. ವಿಶೇಷವಾಗಿ ಕೊರಗ ಸಮುದಾಯದವರ ಬುಟ್ಟಿ ನೇಯ್ಗೆ ಪ್ರದರ್ಶನ, ನೂರ ನಲವತ್ತುಬಗೆಯ ಧಾನ್ಯಗಳು, ಕುಡುಗೋಲುತಯಾರಿಕೆಎಲ್ಲರ ಗಮನ ಸೆಳೆಯುತ್ತಿತ್ತು. ಕೃಷಿಸಿರಿ ಸುತ್ತಾಡಿ ಬಳಲಿದವರಿಗೆಕಲ್ಲಂಗಡಿ, ಅನಾನಸು ಹಣ್ಣಿನ ಸ್ವಾದ ಮತ್ತುತಾಜಾಕಬ್ಬಿನ ಹಾಲು ಧಣಿವಾರಿಸುತಿತ್ತು.

ಪಸ್ತುತವಾಗಿ  ಬರೀ ಕಾಗೆ, ಪಾರಿವಾಳ ಅಪರೂಪಕ್ಕೆ ಗಿಳಿ, ಗುಬ್ಬಚ್ಚಿಗಳು ಕಾಣಸಿಗುತ್ತವೆ ಆದರೆ ಕೃಷಿಸಿರಿಯ ಪಕ್ಷಿಗಳ ಪ್ರದರ್ಶನದಲ್ಲಿ ಇಲ್ಲಿಯವರೆಗೆ ಕಾಣದೇ ಇರುವಂತಹ ಬಗೆಯ ಪಕ್ಷಿಗಳು ಎಲ್ಲರನ್ನುಆಕರ್ಷಸುತ್ತಿದ್ದವು. ಸಿಲ್ಕಿ, ಬ್ಲಾಕ್ ಫಾರ್‌ಟೈಲ್, ಆಲ್ಬಿರೋ ಪರ್ಲ್, ಜರ್ಮನ್ ಬ್ಯೂಟಿ, ಉಷ್ಟ್ರಪಕ್ಷಿ ಪಕ್ಷಿಗಳು ಗಮನ ಸೆಳೆದವು.ಅದರಜೊತೆಗೆ ಬೊಸಾಯಿ ಗಿಡ ಪ್ರದರ್ಶನವು ವಿನೂತನ ಮಾದರಿಯಲ್ಲಿದ್ದವು. ಬ್ಲೂಜುನಿಪೆರಸ್, ಜುನಿಪೆರಸ್( ಬ್ರೂಮ್ ಸ್ಟೈಲ್), ಫಿಕಸ್, ಫಾರ್ಮಲ್‌ಅಪ್‌ರೈಟ್‌ಜಾತಿಯ ಗಿಡಗಳು ಮಾರಟಕ್ಕೆ ಲಭ್ಯವಿದ್ದವು.

ಸಮುದ್ರ ತನ್ನ  ಅಂತರಾಳದಲ್ಲಿ ಹುದುಗಿಸಿಟ್ಟ ಹಲವು ಬಗೆಯ ವಿನೂತನ ಮಾದರಿಯ ಚಿಪ್ಪುಗಳ ಪ್ರದರ್ಶನ ವಿಮರ್ಶತ್ಮಕವಾಗಿತ್ತು. ಸಮುದ್ರಚಿಪ್ಪು ಮತ್ತು ಮತ್ಸ್ಯ ಪ್ರದರ್ಶನಕೇಂದ್ರದಲ್ಲಿ ಸುಮಾರು 500 ಬಗೆಯ ವಿವಿಧ ಮಾದರಿಯ ಚಿಪ್ಪುಗಳಿದವು. ಅದೇರೀತಿ ಹಲವು ಬಗೆಯ ಮೀನುಗಳು ಪ್ರದರ್ಶನದಲ್ಲಿ ಮೋಡಿ ಮಾಡುತ್ತಿದ್ದವು.

ಸಮುದ್ರಚಿಪ್ಪು ಮತ್ತು ಮತ್ಸ್ಯಪ್ರದರ್ಶನ ಕೇಂದ್ರದ ಆಯೋಜಕರು ತಿಳಿಸಿದ ಪ್ರಕಾರ ಈ ಪ್ರದರ್ಶನದ ಮುಖ್ ಯಉದ್ದೇಶವೆಂದರೆ ಪ್ರಸ್ತುತ ಜನರೆಲ್ಲರು ಸಮುದ್ರವನ್ನು ಮೀನುಗಾರಿಕೆಯ ಹೆಸರಲ್ಲಿ, ಕಸ ವಿಲೇವಾರಿ ಮಾಡುವ ಮೂಲಕ ಹಾಳುಗೆಡವುತ್ತಿದ್ದಾರೆ. ಆದ ಕಾರಣ ಸಮುದ್ರ ತನ್ನಲ್ಲಿ ಅತ್ಯಮೂಲ್ಯ ವಸ್ತುಗಳನ್ನು ಹುದುಗಿಸಿಕೊಂಡಿದ್ದು ಅದನ್ನು ನಾಶಮಾಡಬೇಡಿ ಎಂಬ ಸಾಮಾಜಿಕ ಸಂದೇಶವನ್ನು ನೀಡಲಾಗುತ್ತಿದೆ..

ಕೃಷಿ ಸಿರಿಯಲ್ಲಿ ಎಲ್ಲರು ನಿಬ್ಬೆರಗಾಗುವಂತೆ ಮಾಡುತ್ತಿದದ್ದು ಗುಜರಾತ್ ತಳಿಯ ಎತ್ತುಗಳು. ಎತ್ತರ ದೇಹ, ಉದ್ದದ ಕೊಂಬು,ಗತ್ತಿನ ನಿಲುವಿನ ಜೊತೆ ರಾಜ ಗಾಂಭೀರ್ಯದಿಂದ ವರ್ತಿಸುತ್ತಿದ್ದಂತೆ ಭಾಸವಾಗುತ್ತಿತ್ರು.ಮುಂದುವರಿದ ಜಗತ್ತಿನಲ್ಲಿಯಾಂತ್ರೀಕರಣವಾಗುತ್ತಿರುವ ಹೊತ್ತಿನಲ್ಲಿ ಹಳ್ಳಿಯ ಸೊಗಡುಇನ್ನುಅಲ್ಲಲ್ಲಿ ಜೀವಂತವಾಗಿ ಉಳಿದಿದೆ ಎಂದು ತೋರಿಸಿ ಕೊಡುವಂತಿತ್ತು.

ಕೃಷಿ ಸಿರಿಯ ಮುಖ್ಯ ಪ್ರದರ್ಶನವೆಂದರೆ ಕೃಷಿ ಪ್ರದರ್ಶನ. ಡ್ರಾಗನ್ ಫ್ರೂಟ್ಸ್, ರೆಡ್ ಪಿಯರ್‍ಸ್, ಅಂಬಷ್ಟ, ದೊಡ್ಡಕಾಯಿ, ಭದ್ರಾಕ್ಷಿ ಇನ್ನು ಹತ್ತು ಹಲವಾರು ಬಗೆಯ ಹಣ್ಣುಗಳಿದ್ದರೆ, ಸುಮಾರು 20 ಹೆಚ್ಚಿನ ಬಗೆಯಅಡಿಕೆ ತಳಿಗಳು,  ನೂರಕ್ಕೂ ಮಿಕ್ಕಿದ ವಿವಿಧ ಬಗೆಯ ಭತ್ತದ ತಳಿ, ಹಲವು ಬಗೆಯ ಬಾಳೆಗೊನೆ,  ತೆಂಗಿನಗರಿಯಿಂದ ತಯಾರಿಸಿದ ಗಣಪತಿ ಮತ್ತು ತೆಂಗಿನಚಿಪ್ಪಿನಲ್ಲಿ ರಚಿಸಿದ ಕ್ರಿಯಾತ್ಮಕ ಕಲಾಕೃತಿಗಳು ನೋಡುಗರನ್ನ ಅಚ್ಚರಿಗೊಳಿಸುತ್ತಿದ್ದವು.

ನೋಡುಗರನ್ನು ನಗು ನಗುತ್ತಾ ಸ್ವಾಗತಿಸುತ್ತಿರುವ ಬಣ್ಣ ಬಣ್ಣದ ಹೂಗಳು ಕೃಷಿಸಿರಿಯ ಮೆರುಗನ್ನು ಹೆಚ್ಚಿಸುತಿತ್ತು.ಸುಮಾರುಐವತ್ತಕ್ಕೂ ಹೆಚ್ಚು ಬಗೆಯ ಹೂಗಳು ನೋಡುಗರಕಣ್ಣಿಗೆ ಮುದ ನೀಡುತ್ತಿದ್ದವು.ಸ್ವಲ್ಪ ಮುಂದೆ ಸಾಗಿದರೆಒಂದುತಂಪಾದ ಹಸಿರಾಗಿರುವ ತರಕಾರಿ ತೋಟಗಳು ಕಾಣಸಿಗುತ್ತವೆ. ಹಾಗಲಕಾಯಿ. ಪಡವಲಕಾಯಿ, ಟೊಮಾಟೋ, ಅಲಸಂಡೆ, ಕಾಳುಮೆಣಸು ಹೀಗೆ ನಾನಾ ರೀತಿಯ ತರಕಾರಿಗಳು ನುಡಿಸಿರಿ ತೋಟದಲ್ಲಿ ಬೆಳೆದಿದ್ದವು.

ಆಧುನಿಕತೆಯ ನೆಲೆಗಟ್ಟಿನಲ್ಲಿ ಹಳೆಯ ಕಾಲದ ಸೊಗಡು ಬೆರೆತು ಕೃಷಿಸಿರಿಯು ಅಭೂತಪೂರ್ವವಾಗಿ ಮತ್ತುಅರ್ಥಪೂರ್ಣವಾಗಿ ನುಡಿಸಿರಿಯ ಕೇಂದ್ರಬಿಂದುವಾಗಿದೆ.

(ಲೇಖಕಿ ದ್ವಿತೀಯ ಎಂಸಿಜೆ ವಿದ್ಯಾರ್ಥಿನಿ, ಸ್ನಾತಕೋತ್ತರ ಕೇಂದ್ರ ಉಜಿರೆ)

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts