ವಿಟ್ಲ

ಅಂತರಂಗ ಅರಿಯಲು ಭಗವದ್ಗೀತೆ ಪೂರಕ: ಒಡಿಯೂರು ಶ್ರೀ

 

ಜಾಹೀರಾತು

ಗವದ್ಗೀತೆ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಬದುಕನ್ನು ಹಸನಾಗಿಸುವುದಕ್ಕೆ ಬೆಳಕು ಅದರಲ್ಲಿದೆ. ಭಗವಂತನಿಂದಲೇ ಉಧೃತವಾದ ಗೀತೆಯಿಂದ ಆತ್ಮವಿಶ್ವಾಸ ವೃದ್ಧಿಸುತ್ತದೆ. ಆತ್ಮವಿಶ್ವಾಸ ಬಲವಾದರೆ ಜಯ ನಮ್ಮದಾಗುತ್ತದೆ. ಸುಖ ನಮ್ಮ ಅಂತರಂಗದಲ್ಲಿಯೇ ಅಡಗಿದೆ ಎಂಬುದನ್ನು ಅರಿಯಲು ಭಗವದ್ಗೀತೆ ಅವಶ್ಯಕ ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಗೀತಾ ಜಯಂತಿಯ ಸಂದೇಶ ನೀಡಿದರು.

ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ದತ್ತಜಯಂತಿಯ ಸುಸಂದರ್ಭ ಆಯೋಜಿಸಿದ್ದ ಶ್ರೀ ಗುರುಚರಿತ್ರೆ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡುತ್ತಾ ಗುರುತತ್ತ್ವದಲ್ಲಿ ಶ್ರೇಷ್ಠತೆ ಇದೆ. ಈ ಜಗತ್ತೇ ಒಂದು ವಿಶ್ವವಿದ್ಯಾನಿಲಯ. ಅದಕ್ಕಾಗಿಯೇ ಭಗವಾನ್ ಶ್ರೀ ದತ್ತಾತ್ರೇಯರು ಜಗತ್ತನ್ನೇ ಗುರುವಾಗಿ ಸ್ವೀಕರಿಸಿ ಜಗದ್ಗುರುಗಳಾದರು. ಜಗತ್ತಿನಿಂದ ಕಲಿಯಲು ನಮಗೂ ಬೇಕಾದಷ್ಟು ಇದೆ. ಕಲಿಗಾಲ ಎಂದರೆ ಕಲಿಯುವ ಕಾಲ. ಈ ಯುಗದಲ್ಲಿ ಶ್ರವಣಕ್ಕೆ ಬಹಳ ಮಹತ್ತ್ವವನ್ನು ಕೊಟ್ಟಿದ್ದಾರೆ. ಗುರುತತ್ತ್ವದ ವಿಚಾರಗಳನ್ನು ಶ್ರವಣ ಮಾಡಿ ಮನನ ಹಾಗೂ ನಿಧಿಧ್ಯಾಸನ ಮಾಡಿದರೆ ಬದುಕಿನಲ್ಲಿ ಸಿಗುವ ಸಂತಸ ಇನ್ನೊಂದರಲ್ಲಿ ಇಲ್ಲ. ಗುರುತತ್ತ್ವಕ್ಕೆ ಆಕರ್ಷಣಾ ಶಕ್ತಿಯಿದೆ. ಆತ್ಮವಿಶ್ವಾಸವನ್ನು ತುಂಬುವ ಕಾರ್ಯ ಗುರುಚರಿತ್ರೆ ಮಾಡುತ್ತದೆ. ಬದುಕಿಗೆ ಬೆಳಕು ನೀಡುವ ದಾರಿಯಲ್ಲಿ ನಡೆಯುವುದಕ್ಕೆ ಗುರುಚರಿತ್ರೆ ಸಹಕಾರಿ. ವಾಮನಾವತಾರದಲ್ಲಿ ವಾಮನ ಕಾಮ-ಕ್ರೋಧ, ಲೋಭ, ಮದ, ಮತ್ಸರಗಳನ್ನು ಮೆಟ್ಟಿ ನಿಂತು ನಾನು, ನನ್ನದು, ನನ್ನಿಂದಾದುದು ಶೂನ್ಯ ಎಂಬುದನ್ನು ಬಲಿಗೆ ಬೋಧಿಸಿದ. ಹಾಗೆಯೇ ಒಳ್ಳೆಯ ವಿಚಾರಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ಮೋಕ್ಷ ಪ್ರಾಪ್ತವಾಗುವುದರಲ್ಲಿ ಸಂದೇಹ ಬೇಡ ಎಂದರು. ಮಲಾರು ಜಯರಾಮ ರೈ ಶ್ರೀ ಗುರುಚರಿತ್ರೆ ಪ್ರವಚನಗೈದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

4 hours ago