ಸರಕಾರದ ಯೋಜನೆಗಳು ಸಮರ್ಪಕವಾಗಿ ಜಾರಿಗೊಳಿಸಬೇಕಾದರೆ ಗ್ರಾಮಸ್ಥರ ಸಹಭಾಗಿತ್ವ ಬೇಕು ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಇರಾ ಗ್ರಾಮದ ಸೂತ್ರಬೈಲು – ಕುಕ್ಕಾಜೆ ಮುಖ್ಯ ರಸ್ತೆಯ ಕುಕ್ಕಾಜೆ ಸೈಟ್ – ಹತ್ತುಕಳಸೆ ರಸ್ತೆ ಕಾಂಕ್ರೀಟ್ ಕಾಮಗಾರಿ ಮತ್ತು ತಡೆಗೋಡೆ ಉದ್ಘಾಟಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರವು ಗ್ರಾಮೀಣ ಪ್ರದೇಶಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ ಗಾಂಧೀಜಿಯವರ ಕಲ್ಪನೆಯಾದ ಗ್ರಾಮಸ್ವರಾಜ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಅಭಿವೃದ್ಧಿಯಲ್ಲಿ ದೇಶಕ್ಕೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ ಆರ್ ಕರ್ಕೇರ ಹಾಗೂ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ ಮಾತಾನಾಡಿದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ನಾಸೀರ್ ನಡುಪದವು, ಡಿ.ಕೆ.ಹಂಝ ಕುಕ್ಕಾಜೆ, ಎಸ್.ಅಬೂಬಕರ್ ಸಜೀಪ, ಗ್ರಾಮ ಪಂಚಾಯತ್ ಸದಸ್ಯರಾದ ದೇವದಾಸ್ ಅಡಪ, ಮೊಯಿದು ಕುಂಞಿ, ಅಬ್ದುಲ್ ರಹಿಮಾನ್ ಮುದುಂಗಾರು, ನೆಬಿಸ, ಪಾರ್ವತಿ, ಸ್ಥಳೀಯ ಗಣ್ಯರಾದ ರಾಜೇಶ್ ಶೆಟ್ಟಿ ಕುಕ್ಕಾಜೆ, ಸಿ.ಎಚ್.ಮಹಮ್ಮದ್, ವಿಶ್ವನಾಥ ಶೆಟ್ಟಿ, ಕಮಲಾಕ್ಷ, ಇಬ್ರಾಹಿಂ ಪತ್ತುಮುಡಿ, ಫೈಝಲ್, ಇಸ್ಮಾಯಿಲ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕಾಮಗಾರಿಗೆ ಅನುದಾನ ಒದಗಿಸಿದ ಸಚಿವರಾದ ಯು.ಟಿ.ಖಾದರ್, ಜಮೀನಿನ ಸ್ಥಳದಾನ ಮಾಡಿದ ರಾಜೇಶ್ ಶೆಟ್ಟಿ ಕುಕ್ಕಾಜೆ, ಗುತ್ತಿಗೆದಾರ ಅಶ್ರಫ್ ಮೂಲರಪಟ್ಣರವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಇರಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಸ್ವಾಗತಿಸಿ ಪ್ರಸ್ತಾಪನೆಗೈದರು.ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ್ ಧನ್ಯವಾದ ಸಲ್ಲಿಸಿ, ನಝೀರ್ ಕುಕ್ಕಾಜೆ ಕಾರ್ಯಕ್ರಮ ನಿರ್ವಹಿಸಿದರು.