ದಕ್ಷಿಣ ಕನ್ನಡ ಜಿಲ್ಲೆಯ ಮಾಣಿಲ ಯೋಗಿಕೌಸ್ತುಭ ಕರ್ಮಯೋಗಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ ಗೋಕರ್ಣ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು.
ಶ್ರೀ ದೇವಾಲಯದ ಆಡಳಿತಾಧಿಕಾರಿ ಜಿ. ಕೆ. ಹೆಗಡೆ ದೇವಾಲಯದ ಪರವಾಗಿ ಪೂಜ್ಯರಿಗೆ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು. ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ವೇ. ವಿಶ್ವನಾಥ್ ಭಟ್ ಬಾಳೆಹಿತ್ಲು ಪೂಜಾ ಕೈಂಕರ್ಯ ನೆರವೇರಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…