www.bantwalnews.com REPORT
ಮಂಗಳೂರಿನ ಜೇಸಿ ಮಂಗಳೂರು ಸಾಮ್ರಾಟ್ ವತಿಯಿಂದ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಜೇಸಿ ಆಂದೋಲನ ಕುರಿತು ಮಾಹಿತಿ ಕಾರ್ಯಾಗಾರ ಇತ್ತೀಚೆಗೆ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಜೇಸಿ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ, ಜೇಸಿ ಆಂದೋಲನದ ಮಹತ್ವಗಳನ್ನು ಹೇಳಿದರು.
ಮುಖ್ಯ ಅತಿಥಿಗಳಾಗಿ ವಲಯ 15ರ ಅಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ರಾಕೇಶ್ ಕುಂಜೂರು ಮತ್ತು ಉಪಾಧ್ಯಕ್ಷರಾಗಿ ನಿಯುಕ್ತಿಗೊಂಡಿರುವ ಪಶುಪತಿ ಶರ್ಮಾ ಶುಭ ಹಾರೈಸಿದರು.
ಈ ಸಂದರ್ಭ ಜೋಡುಮಾರ್ಗ ನೇತ್ರಾವತಿ ಜ್ಯೂನಿಯರ್ ಚೇಂಬರ್ ನ ಆರಂಭಿಕ ಪದಾಧಿಕಾರಿಗಳಾಗಿದ್ದ ಪ್ರೊ.ವೃಷಭರಾಜ್, ಮಹಾಬಲೇಶ್ವರ ಹೆಬ್ಬಾರ್ ಬಿ.ಸಿ.ರೋಡಿನಲ್ಲಿ ಜೇಸಿ ಬೆಳೆದುಬಂದ ದಾರಿ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಬಿ.ರಾಮಚಂದ್ರ ರಾವ್ ಕಾರ್ಯಕ್ರಮದ ಆಶಯವನ್ನು ವಿವರಿಸಿದರು.
ಜೋಡುಮಾರ್ಗ ಜೇಸಿಯ ಅಹಮದ್ ಮುಸ್ತಾಫ, ಹರೀಶ ಮಾಂಬಾಡಿ, ರಾಮದಾಸ ಬಂಟ್ವಾಳ ಸಂವಾದದಲ್ಲಿ ಮಾತನಾಡಿದರು. ಈ ಸಂದರ್ಭ ಜೋಡುಮಾರ್ಗ ಜೇಸಿಯ ನಿಯೋಜಿತ ಅಧ್ಯಕ್ಷೆ ಸವಿತಾ ನಿರ್ಮಲ್, ಕಾರ್ಯದರ್ಶಿ ಅಜಿತ್ ಜಿ.ಜೋಷಿ, ಮಂಗಳೂರು ಸಾಮ್ರಾಟ್ ಕಾರ್ಯದರ್ಶಿ ವೆಂಕಟರಮಣ, ಜೋಡುಮಾರ್ಗ ಜೇಸಿಯ ಪೂರ್ವಾಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…