ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸಿದ್ದರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಧ್ಯಮ ಕ್ಷೇತ್ರದ ಹಲವು ಸಾಧಕರನ್ನು 2017ರ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪ್ರಶಸ್ತಿ ಪುರಸ್ಕೃತರಿಗೆ 20 ಸಾವಿರ ರೂ ನಗದು, ಫಲಕ ನೀಡಿ ಗೌರವಿಸಲಾಗುವುದು. ಒಟ್ಟು 40 ಪತ್ರಕರ್ತರಿಗೆ ಈ ಸಾಲಿನ ಮಾಧ್ಯಮ ಅಕಾಡೆಮಿ ಪ್ರಶಸ್ತಿಯ ಗೌರವ.
ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪತ್ರಕರ್ತರಾಗಿರುವ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕಿರಣ ಪತ್ರಿಕೆಯ ಬಾಳ ಜಗನ್ನಾಥ ಶೆಟ್ಟರು ಹಾಗೂ ಸುದ್ದಿ ಬಿಡುಗಡೆ ಪತ್ರಿಕೆ ಮೂಲಕ ಗ್ರಾಮೀಣ ಪತ್ರಿಕಾರಂಗಲ್ಲಿ ಸಾಧನೆ ಮಾಡಿರುವ ಡಾ. ಯು.ಪಿ.ಶಿವಾನಂದ ಅವರಿಗೆ ಈ ಬಾರಿಯ ಮಾಧ್ಯಮ ಅಕಾಡೆಮಿ ಪ್ರಶಸ್ತಿಯ ಗರಿ. ಇಬ್ಬರಿಗೂ www.bantwalnews.com ಪರವಾಗಿ ಅಭಿನಂದನೆ.
ವಿವರ ಹೀಗಿದೆ.
ಬಾಳ ಜಗನ್ನಾಥ ಶೆಟ್ಟಿ (ಜಯಕಿರಣ), ಡಾ.ಯು.ಪಿ.ಶಿವಾನಂದ (ಸುದ್ದಿ ಬಿಡುಗಡೆ), ರಮೇಶ ಕುಟ್ಟಪ್ಪ (ವಿಜಯವಾಣಿ), ಬಸವಣ್ಣ (ಛಾಯಾಗ್ರಾಹಕ), ಶಿವಣ್ಣ (ವಿಜಯವಾಣಿ), ಗೋವಿಂದ (ಆಂದೋಲನ), ವಸಂತಕುಮಾರ್ (ದೂರದರ್ಶನ), ಡಿ.ಎಸ್.ಶಿವರುದ್ರಪ್ಪ ( ಹಿರಿಯ ಪತ್ರಕರ್ತರು), ಮಾಳಪ್ಪ ಅಡಸಾರೆ (ಅಂತರಂಗ ಸುದ್ದಿ), ಡಿ.ಶಿವಲಿಂಗಪ್ಪ (ಕರ್ನಾಟಕ ಸಂಧ್ಯಾಕಾಲ), ಚೆನ್ನಬಸವಣ್ಣ (ಈಟಿವಿ ಕನ್ನಡ), ಶಿವಪ್ಪ ಮಡಿವಾಳ(ರಾಯಚೂರುವಾಣಿ), ದತ್ತು ಸರ್ಕಿಲ್ (ಜನಕೂಗು), ಸಾದಿಕ್ ಆಲಿ (ಲೋಕದರ್ಶನ), ಸಿ.ಮಂಜುನಾಥ್ (ಈಶಾನ್ಯ ಟೈಮ್ಸ್), ಸಂಗಮೇಶ ಚೂರಿ (ವಿಜಯ ಕರ್ನಾಟಕ), ಮಹೇಶ ಅಂಗಡಿ (ಸಂಜೆ ದರ್ಶನ) , ರಾಮು ವಗ್ಗಿ (ಛಾಯಾಚಿತ್ರಗ್ರಾಹ), ವಿಜಯ ಕುಮಾರ್ ಪಾಟೀಲ (ದಿ ಹಿಂದು) , ಬಾಲಕೃಷ್ಣ ರಾಮಚಂದ್ರ ವಿಭೂತೆ (ಇಂಡಿಯನ್ ಎಕ್ಸ್ ಪ್ರೆಸ್), ಉಗಮ ಶ್ರೀನಿವಾಸ (ಕನ್ನಡಪ್ರಭ), ಗಣಪತಿ ಗಂಗೊಳ್ಳಿ (ಸಂಜೆ ದರ್ಪಣ) , ಶಿವಕುಮಾರ ಕಣಸೋಗಿ (ಪ್ರಜಾವಾಣಿ), ಬಸವರಾಜ ದೊಡ್ಡಮನಿ (ಟಿ.ವಿ.9), ರವಿ ಬಿದನೂರು (ಸಮಯ ನ್ಯೂಸ್), ಷ. ಮಂಜುನಾಥ (ಸುದ್ದಿಗಿಡುಗ), ಎಚ್.ಎನ್.ಮಲ್ಲೇಶ (ಉದಯ ಟಿವಿ), ಮಹಮದ್ ಯುನುಸ್ (ಈ ಮುಂಜಾನೆ), ಕೋ.ನ. ಮಂಜುನಾಥ (ಪ್ರಿಯ ಪತ್ರಿಕೆ), ಕೆ.ಆರ್.ಮಂಜುನಾಥ (ಹಿರಿಯ ಪತ್ರಕರ್ತರು), ಜಯಕುಮಾರ್ (ಜಯಮಿತ್ರ), ವೈ.ಎಸ್.ಎಲ್.ಸ್ವಾಮಿ (ಸಂಜೆವಾಣಿ), ಬಾಗೇಶ್ರೀ (ದಿ ಹಿಂದು), ಸೌಮ್ಯ ಅಜಿ (ಎಕನಾಮಿಕ್ ಟೈಮ್ಸ್) ,ಎಂ.ಸಿ.ಶೋಭಾ (ಸುವರ್ಣ ಟಿವಿ), ಬಿ.ಎನ್. ಶ್ರೀಧರ (ಪ್ರಜಾವಾಣಿ), ಸ್ಟಾಲಿನ್ ಪಿಂಟೋ (ಛಾಯಾಗ್ರಾಹಕ), ಆದಿನಾರಾಯಣ (ಈನಾಡು), ಮಮ್ತಾಜ್ ಆಲೀಂ (ಸುದ್ದಿಟಿವಿ), ಟಿ.ಅಶ್ವತ್ಥರಾಮಯ್ಯ (ವಾಲ್ಮೀಕಿ ರೈಟ್ಸ್ ಆಫ್ ಇಂಡಿಯಾ)