www.bantwalnews.com REPORT
ದತ್ತಮಾಲಾಧಾರಣೆ ಪುಣ್ಯ ಸಂಪಾಧನೆಗಾಗಿ ಮಾಡುವಂತಹದ್ದು, ಈ ಸಮಯ ಕೋಪ ತಾಪ ಬಿಟ್ಟು ಬಿಡಬೇಕು. ಜಾಗೃತಿ ಬದುಕಿನುದ್ದಕ್ಕೂ ಇದ್ದಾಗ ಜೀವನ ಸಾರ್ಥಕ್ಯದೆಡೆಗೆ ಹೋಗಲು ಸಾಧ್ಯ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಸೋಮವಾರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀ ದತ್ತಜಯಂತಿ ಮಹೋತ್ಸವ ದಂಗವಾಗಿ ಶ್ರೀ ದತ್ತಮಾಲಾಧಾರಣಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಧರ್ಮ ಸಂಸ್ಕೃತಿ ತಿಳುವಳಿಕೆ ಬಂದಾಗ ಎಲ್ಲಾ ಕಾರ್ಯಗಳು ನಡೆಯುತ್ತದೆ. ಅನುಮಾನ ಮತ್ತು ಅನುಭವದ ಒಟ್ಟಾಗಲು ಸಾಧ್ಯವಿಲ್ಲ. ಅನುಮಾನಕ್ಕೆ ಉತ್ತರ ಅನುಭವದಲ್ಲಿದೆ ಎಂದು ಹೇಳಿದರು.
ಊರ-ಪರವೂರಿನ, ಹೊರರಾಜ್ಯಗಳ ಸುಮಾರು 162 ಮಂದಿ ಗುರುಭಕ್ತರು ಶ್ರೀ ದತ್ತಮಾಲಾಧಾರಣೆ ಮಾಡಿದರು. ಒಡಿಯೂರು ಸಾಧ್ವಿ ಶ್ರೀ ಮಾತಾನಂದಮಯೀ ದಿವ್ಯ ಸಾನಿಧ್ಯ ಕರುಣಿಸಿದ್ದರು.
ಮುಂಬಯಿ ಉದ್ಯಮಿ ವಾಮಯ್ಯ ಬಿ ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಅಶೋಕ್ ಕುಮಾರ್ ಬಿಜೈ, ಮಂಗಳೂರು ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಜಯಂತ್ ಜೆ ಕೋಟ್ಯಾನ್, ಗ್ರಾಮೋತ್ಸವ ಸಮಿತಿ ಅಧ್ಯಕ್ಷ ಎಚ್ ಕೆ ಪುರುಷೋತ್ತಮ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ಧ ಸಹಕಾರಿ ನಿಯಮಿತದ ಮಾಜಿ ಪ್ರಧಾನ ವ್ಯವಸ್ಥಾಪಕ ಉಗ್ಗಪ್ಪ ಶೆಟ್ಟಿ, ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರಒಡಿಯೂರು ಘಟಕದ ಅಧ್ಯಕ್ಷೆ ಸರ್ವಾಣಿ ಪಿ.ಶೆಟ್ಟಿ, ಮುಂಬೈ ಘಟಕದ ಅಧ್ಯಕ್ಷೆ ರೇವತಿ ವಿ. ಶೆಟ್ಟಿ, ಸುಹಾಸಿನಿ ಎಸ್. ಶೆಟ್ಟಿ, ಕಲ್ಪನಾ ಕೆ. ಶೆಟ್ಟಿ, ವನಜಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಟಿ. ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ವೇ. ಮೂ. ಚಂದ್ರಶೇಖರ ಉಪಧ್ಯಾಯರ ನೇತೃತ್ವದಲ್ಲಿ ಶ್ರೀ ದತ್ತ ಮಹಾಯಾಗ ನಡೆಯಿತು.