ಕಳೆದ ತಿಂಗಳ ಹಿಂದೆ ಫರಂಗಿಪೇಟೆಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮತ್ತೊರ್ವ ಆರೋಪಿಯನ್ನು ಸೋಮವಾರ ಮಂಗಳೂರು ಡಿಸಿಐಬಿ ತಂಡ ಬಂಧಿಸಿದೆ. ಅಡ್ಯಾರ್ ನಿವಾಸಿ ಇಮ್ರಾನ್ ಯಾನೆ ಪಲ್ಟಿ ಇಮ್ರಾನ್ ಬಂಧಿತ ಆರೋಪಿ.
ಡಿಸಿಐಬಿ ಇನ್ ಸ್ಪೆಕ್ಟರ್ ಅಮಾನುಲ್ಲಾ ನೇತೃತ್ವ ತಂಡವು ಇಂದು ಕಾರ್ಯಾಚರಣೆ ನಡೆಸಿ ಮಂಗಳೂರಿನ ತೊಕ್ಕೊಟ್ಟಿನಲ್ಲಿ ಇಮ್ರಾನ್‌ನನ್ನು ಬಂಧಿಸಲಾಗಿದೆ. ಪ್ರಕರಣದ ಮುಂದಿನ ತನಿಖೆಗಾಗಿ ಈತನನ್ನು ಬಂಟ್ವಾಳ ಎಎಸ್ಪಿ ಡಾ.ಅರುಣ್ ಅವರಿಗೆ ಹಸ್ತಾಂತರಿಸಿದ್ದಾರೆ.
ಇತ್ತೀಚೆಗೆ ಫರಂಗಿಪೇಟೆಯಲ್ಲಿ ಅಡ್ಯಾರ್ ಮತ್ತು ಕಣ್ಣೂರಿನ ತಂಡ ಎರಡು ವಾಹನದಲ್ಲಿ ಅಗಮಿಸಿ ನಡೆಸಿದ ಗ್ಯಾಂಗ್ ವಾರ್ ಪ್ರಕರಣದಲ್ಲಿ ಝಿಯಾ ಮತ್ತು ಫಯಾಜ್ ಎಂಬವರಿಬ್ಬರು ಕೊಲೆಗೀಡಾಗಿದ್ದರು. ಹಾಗೆಯೇ ಅನೀಸ್, ಪೈಝಲ್ ಮತ್ತು ಮುಸ್ತಾಕ್ ಎಂಬವರು ಗಂಭೀರ ಗಾಯಗೊಂಡಿದ್ದರು. ಘಟನೆಗೆ ಹಳೆಯ ದ್ವೇಷವೇ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಟ್ಟು 11 ಮಂದಿಯನ್ನು ಬಂಧಿಸಲಾಗಿತ್ತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…