ಮಾನವ ಬಂಧುತ್ವ ವೇದಿಕೆ ಕರ್ನಾಟಕ ವತಿಯಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ಮೌಡ್ಯ ವಿರೋಧಿ ಜನಜಾಗೃತಿ ಜಾಥಾ ಭಾನುವಾರ ಸಂಜೆ ಬಿ.ಸಿ.ರೋಡಿಗೆ ಆಗಮಿಸಿತು.
ಮಾನವ ಬಂಧುತ್ವ ವೇದಿಕೆ ಬಂಟ್ವಾಳ ತಾಲೂಕು ಘಟಕದ ವತಿಂದ ಜಾಥಾವನ್ನು ಬಿ.ಸಿ.ರೋಡಿನ ಪ್ಲ್ಯೆ ಒವರ್ ಕೆಳಗಡೆ ಸ್ವಾಗತಿಸಲಾಯಿತು.
ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ವಿಲ್ಫ್ರೆಡ್ ಡಿಸೋಜ ಪ್ರಧಾನ ಭಾಷಣಗಾರರಾಗಿ ಮಾತನಾಡಿ ರಾಜ್ಯದಲ್ಲಿ ಜಾತಿ, ಮತ, ,ಧರ್ಮ, ದೇವರ ಹೆಸರಿನಲ್ಲಿ ಜನರ ಮನಸ್ಸನ್ನು ಒಡೆಯುವ ಪ್ರಯತ್ನ ಎಗ್ಗಿಲ್ಲದೆ ನಡೆಯುತ್ತಿದೆ. ಈ ಬಗ್ಗೆ ಮಾನವೀಯತೆಯ ಮೇಲೆ ನಂಬಿಕೆ ಇಟ್ಟಿರುವ ಎಲ್ಲರೂ ಜಾಗೃತರಾಗಿ ಜಾತ್ಯಾತೀತ, ಸಮಾನತೆಯ, ಸಾಮರಸ್ಯದ ನಾಡನ್ನು ಕಟ್ಟಲು ಸಂಕಲ್ಪ ತೊಡಬೇಕಾಗಿದೆ. ಮುಗ್ದ ಜನರ ಮೌಢ್ಯವನ್ನು ಹೇರಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಜನರ ಬಗ್ಗೆಯೂ ನಾವು ಸಮಾಜಕ್ಕೆ ಅರಿವು ಮೂಡಿಸಿದ ಜನರನ್ನು ಜಾಗೃತಗೊಳಿಸಬೇಕಾಗಿದೆ ಎಂದರು.
ಡಿ.೬ರಂದು ಬೆಳಗಾವಿಯ ರುದ್ರಭೂಮಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರ ಮಹಾಪರಿನಿರ್ಮಾಣ ದಿನವನ್ನು ಮೌಢ್ಯವಿರೋಧಿ ಸಂಕಲ್ಪ ದಿನವನ್ನಾಗಿ ಆಚರಿಸಲಾಗುತ್ತಿದ್ದು ನಾಡಿನ ಸಂತರು, ಚಿಂತಕರು ಸೇರಿದಂತೆ ಐವತ್ತಕ್ಜೂ ಹೆಚ್ಚು ಸಾವಿರ ಜನರು ಭಾಗವಹಿಸಲಿದ್ದಾರೆ. ಬುಧ್ದ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿ, ಪೆರಿಯಾರ್, ನಾರಾಯಣ ಗುರು ಮೊದಲಾದವರ ಮಾನವೀಯತೆಯ ಸಂದೇಶದಡಿ ಈ ನಾಡನ್ನು ಕಟ್ಟಲು ನಾವೆಲ್ಲ ಸಂಕಲ್ಪ ತೊಡಬೇಕಾಗಿದೆ ಎಂದು ಅವರು ಹೇಳಿದರು. ವೇದಿಕೆಯ ಗೌರವ ಸಲಹೆಗಾರರಾದ ರಮೇಶ್ ನಾಯಕ್ ರಾಯಿ, ಪ್ರಭಾಕರ ದ್ಯೆವಗುಡ್ಡೆ, ಎಂ.ಎಸ್.ಇಸ್ಮಾಯಿಲ್, ನಾರಾಯಣ ಕಿಲ್ಲಂಗೋಡಿ, ಚೆನ್ನಕೇಶವ ಬೆಳ್ತಂಗಡಿ, ರಾಮಣ್ಷ ವಿಟ್ಟ, ಪ್ರವೀಣ್ ಬಿ.ಜಕ್ರಿಬೆಟ್ಟು, ಜನಾರ್ದನ ಚೆಂಡ್ತಿಮಾರು, ರಾಜಾ ಚೆಂಡ್ತಿಮಾರು, ಎಚ್ಕೆ.ನಯನಾಡು, ನಾದ ಮಣಿನಾಲ್ಕೂರು, ಗಣೇಶ್ ನಾಯಕ್ ವಾಮದಪದವು ಮೊದಲಾದವರಿದ್ದರು.
ತಾಲೂಕು ಸಂಚಾಲಕ ಗೋಪಾಲ ಅಂಚನ್ ಸ್ವಾಗತಿಸಿದರು..ಸಲಹೆಗಾರ ಟಿ.ಶೇಷಪ್ಪ ಮೂಲ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು.ರಾಜೇಶ್ ಶೆಟ್ಟಿಗಾರ್ ವಂದಿಸಿದರು. ಜಾಥಾ ಕಲಾವಿದರು ಜನಜಾಗ್ರತಿ ಗೀತೆಗಳನ್ನು ಹಾಡಿದರು.