ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿಯಲ್ಲಿ ಶನಿವಾರ ರಾತ್ರಿ ನಡೆದ ವೀರ–ವಿಕ್ರಮ ಜೋಡುಕರೆ ಬಯಲು ಕಂಬಳದಲ್ಲಿ ಒಟ್ಟು 98 ಜೋಡಿ ಓಟದ ಕೋಣಗಳು ಭಾಗವಹಿಸಿದ್ದು, ಸಹಸ್ರಾರು ಮಂದಿ ಕಂಬಳಾಸಕ್ತರು ಪಾಲ್ಗೊಂಡಿದ್ದರು. ಈ ಪೈಕಿ ನೇಗಿಲು ಕಿರಿಯ–36, ನೇಗಿಲು ಹಿರಿಯ –27, ಹಗ್ಗ ಕಿರಿಯ–15, ಹಗ್ಗ ಹಿರಿಯ–13, ಅಡ್ಡಹಲಗೆ–6, ಕನೆಹಲಗೆ–1 ಜೋಡಿ ಓಟದ ಕೋಣಗಳು ಭಾಗವಹಿಸಿ ಗಮನ ಸೆಳೆಯಿತು.
ಸಮಿತಿ ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ, ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಗೌರವ ಸಲಹೆಗಾರ ಸುರೇಶ ಶೆಟ್ಟಿ ಮತ್ತಿತರರು ಇದ್ದರು.
ಫಲಿತಾಂಶ ವಿವರ:
ಕನೆಹಲಗೆ:
ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ –ಪ್ರಥಮ. (ಓಡಿಸಿದವರು: ನಾರಾವಿ ಯುವರಾಜ್ ಜೈನ್)
ಹಗ್ಗ ಹಿರಿಯ:
ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್–ಪ್ರಥಮ. (ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ)
ನಂದಳಿಕೆ ನವ್ಯತಾ ಶ್ರೀಕಾಂತ್ ಭಟ್ (ಬಿ)-ದ್ವಿತೀಯ. (ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ ಎಂ.ಶೆಟ್ಟಿ )
ಹಗ್ಗ ಕಿರಿಯ:
ಮಿಜಾರು ಪ್ರಸಾದ ನಿಲಯ ಶಕ್ತಿಪ್ರಸಾದ್ ಶೆಟ್ಟಿ–ಪ್ರಥಮ. (ಓಡಿಸಿದವರು: ಮಾರ್ನಾಡ್ ರಾಜೇಶ್ )
ಜಪ್ಪು ಮಣ್ಣುತೋಟ ಗುತ್ತು ಸಾಚಿ ಅನಿಲ್ ಶೆಟ್ಟಿ –ದ್ವಿತೀಯ. (ಓಡಿಸಿದವರು: ಬಂಗಾಡಿ ಹಮೀದ್)
ನೇಗಿಲು ಹಿರಿಯ:
ಇರುವೈಲು ಪಾಣೇಲ ಬಾಡ ಪೂಜಾರಿ – ಪ್ರಥಮ. (ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ)
ಕಕ್ಯಪದವು ಪೆಂರ್ಗಾಲ್ ಬಾಬು ವೆಂಕಪ್ಪ ಗೌಡ –ದ್ವಿತೀಯ. (ಓಡಿಸಿದವರು: ಬಾರಾಡಿ ನತೇಶ್)
ನೇಗಿಲು ಕಿರಿಯ:
ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ –ಪ್ರಥಮ. (ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ)
ಮರೋಡಿ ಕೆಳಗಿನ ಮನೆ ಕೃತೇಶ್ ಅಣ್ಣಿ ಪೂಜಾರಿ –ದ್ವಿತೀಯ. (ಓಡಿಸಿದವರು: ಮರೋಡಿ ಶ್ರೀಧರ)
ಅಡ್ಡಹಲಗೆ:
ಆಲದಪದವು ಮೇಗಿನಮನೆ ಶುಭ್ರತ್ ಶೆಟ್ಟಿ –ಪ್ರಥಮ. (ಓಡಿಸಿದವರು: ಮುಳಿಕಾರು ಕೇವುಡೇಲು ಅಣ್ಣಿ ದೇವಾಡಿಗ)
ಗುರುಪುರ ಕೆದುಬರಿ ಯಶೋಧ ಗುರುವಪ್ಪ ಪೂಜಾರಿ–ದ್ವಿತೀಯ. (ಓಡಿಸಿದವರು: ಸಾವ್ಯ ಗಂಗಯ್ಯ ಪೂಜಾರಿ)