ಬಿ.ಸಿ.ರೋಡಿನ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ 26ರಂದು ಸಂಜೆ 4ರಿಂದ ವಚನದೀಪ್ತಿ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರಾದ ಡಾ. ವಿಜಯನಾರಾಯಣ ತೋಳ್ಪಾಡಿ ಮತ್ತು ಡಾ.ವೀಣಾ ತೋಳ್ಪಾಡಿ ತಿಳಿಸಿದ್ದಾರೆ.
ಈ ಸಂದರ್ಭ ವಚನ ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ ಎಂಬ ವಿಷಯದ ಬಗ್ಗೆ ಮಂಗಳಗಂಗೋತ್ರಿಯ ಎಸ್.ವಿ.ಪಿ. ಕನ್ನಡ ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕ ಡಾ. ನಾಗಪ್ಪ ಗೌಡ ಆರ್ ಮಾತನಾಡಲಿದ್ದಾರೆ. ವಚನಗಳಲ್ಲಿ ನುಡಿ ನಡೆ ವಿಷಯದಲ್ಲಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ರಾಜಶೇಖರ ಹಳೆಮನೆ ಮಾತನಾಡುವರು. ಮಂಗಳೂರು ವಿವಿಯ ಡಾ.ಎಚ್.ಎಂ.ಸೋಮಶೇಖರಪ್ಪ ಉಪಸ್ಥಿತರಿರುವರು. ಬಳಿಕ ಸಂಜೆ 6ರಿಂದ ವಚನ ಗಾಯನ ಇರಲಿದೆ. ಸಹನಾ, ಮೇಘನಾ ಗಾಯನ, ಕೀಬೋರ್ಡ್ ನಲ್ಲಿ ಭಾಸ್ಕರ ರಾವ್, ಕೊಳಲಿನಲ್ಲಿ ವರುಣ್ ಎಂ.ರಾವ್ ಮತ್ತು ತಬಲಾದಲ್ಲಿ ನಚಿಕೇತ ದಾಮ್ಲೆ ಸಹಕರಿಸುವರು ಎಂದು ಪ್ರಕಟಣೆ ತಿಳಿಸಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…