ಆರಾಧನೆ

ಮಠಗಳು ಸಮಾಜಮುಖಿಗಳಾದರೆ ಭಾರತ ವಿಶ್ವಗುರು: ಡಿ.ವಿ.ಸದಾನಂದ ಗೌಡ

www.bantwalnews.com ವರದಿ

  • ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಉತ್ತರಕಾಂಡ ರಾಜ್ಯದ ಹರಿದ್ವಾರದಲ್ಲಿ ನಿರ್ಮಿಸಿರುವ ಸಾಧನ ಕುಟೀರ ಉದ್ಘಾಟನೆ

ಜಾಹೀರಾತು

ದೇಶದ ಎಲ್ಲಾ ಮಠಗಳು ಹಾಗೂ ಸನ್ಯಾಸಿಗಳು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳಂತೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಾಗ ಭಾರತ ವಿಶ್ವಗುರು ಆಗುವುದರಲ್ಲಿ ಸಂಶಯವಿಲ್ಲ ಎಂದು ಕೇಂದ್ರ ಅಂಕಿ ಅಂಶಗಳ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು

ದಕ್ಷಿಣ ಕನ್ನಡ ಜಿಲ್ಲೆಯ ನಿತ್ಯಾನಂದ ನಗರದ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಉತ್ತರಕಾಂಡ ರಾಜ್ಯದ ಹರಿದ್ವಾರದಲ್ಲಿ ನಿರ್ಮಿಸಿರುವ ಸಾಧನ ಕುಟೀರವನ್ನು ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಅನೇಕ ಸ್ವಾಮೀಜಿಗಳಿದ್ದಾರೆ, ಹಲವು ಗುರು ಮಠಳಿವೆ. ಆದರೆ ಕೆಲವು ಸ್ವಾಮೀಗಳು ಮಾತ್ರ ಸಮಾಜದ ಅಭಿವೃದ್ದಿಗನಮ್ಮೊಳಗಿನ ನಯನಳನ್ನು ನೀಡುತ್ತಾರೆ. ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ತನ್ನ ಮಠದ ಮೂಲಕ ದೇಶದ ಮೂಲೆ ಮೂಲೆಗೂ ಸೇವಾ ಕಾರ್ಯಗಳನ್ನು ವಿಸ್ತರಿಸಿದ್ದಾರೆ ಎಂದರು.
ಕರ್ನಾಟಕ ಕರಾವಳಿಯಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಹರಿದ್ವಾರಕ್ಕೆ ಬಂದಿರುವುದು ಸಂತಸ ತಂದಿದೆ. ಸಮಾಜದಲ್ಲಿ ಎಲ್ಲರೂ ಒಂದೇ ಎನ್ನುವ ಶ್ರೀಗಳ ಉದ್ದೇಶ ಹಿಮಾಲಯದ ತಪ್ಪಲನ್ನು ತಲುಪಿದೆ.ದಕ್ಷಿಣದ ಉಡುಪಿಯಲ್ಲಿ ಧರ್ಮಸಂಸತ್ ನಡೆಯುತ್ತಿದ್ದರೆ ಕನ್ಯಾಡಿ ಶ್ರೀಗಳ ನೇತೃತ್ವದಲ್ಲಿ ಉತ್ತರದ ಹರಿದ್ವಾರದಲ್ಲಿಯೂ ಧರ್ಮ ಸಂಸತ್ ನಡೆಯುತ್ತಿದೆ ಎಂದರು.

ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿ ನಾವು ಮಾಡುವ ಪ್ರತೀ ಕಾರ್ಯವು ಯಜ್ಞ ಆಗಬೇಕು, ನಿಷ್ಕಾಮ ಭಾವ ಹಾಗೂ ನಿರ್ಮಲ ಮನಸ್ಸಿನಿಂದ ಕೆಲಸ ಮಾಡಬೇಕು ಎಂದರು.

ನಮಗೆ ಶತ್ರುಗಳಿಲ್ಲದಿದ್ದರೂ ಅರಿಷಡ್ವರ್ಗಗಳು ನಮ್ಮೊಳಗಿನ ಶತ್ರುಗಳಾಗಿ ನಮ್ಮನ್ನು ಸರ್ವನಾಶ ಮಾಡುತ್ತದೆ, ಭಾವಶುದ್ದ, ಮನಶುದ್ದವಿಲ್ಲದೆ ಮಾಡುವ ಯಾವ ಪ್ರಾರ್ಥನೆಯೂ ದೇವರನ್ನು ತಲುಪಲು ಸಾಧ್ಯವಿಲ್ಲ ಎಂದರು.

ಹರಿಹರ ಕೈಲಾಸ ಜ್ಞಾನ ಪೀಠದ ಶ್ರೀ ಪ್ರೇಮನಂದಜಿ ಮಹಾರಾಜ್, ಜುನಾ ಅಖಾಡದ ಮಹಾಮಂತ್ರಿ ಶ್ರೀ ದೇವಾನಂದ ಸರಸ್ವತಿವಮಹಾರಾಜ್, ಬಾಬಾ ಹರಿಹರ ಧಾಮದ ಶ್ರೀ ಸೋಮೇಶ್ವರನಂದಜಿ ಮಹಾರಾಜ್ , ಭಟ್ಕಳದ ಶಾಸಕ ಮಂಕಲ್ ಎಸ್. ವೈದ್ಯ, ಹರಿದ್ವಾರದ ಮೇಯರ್ ಮನೋಜ್ ಗರ್ಗ್, ಪ್ರಮುಖರಾದ ಆಶೀಶ್ ಗೌತಮ್, ಭಗವತಿ ಪ್ರಸಾದ್, ಶೇಖರ್ ಬಂಗೇರ, ಪಿತಾಂಬರ ಹೆರಾಜೆ, ಗೌರಿ ಶಂಕರ್, ನರೇಶ್ ಶರ್ಮ, ಅನಿಲ್ ಮಿಶ್ರ, ತಿಮ್ಮೆಗೌಡ, ಪಿತಾಂಬರ ಹೇರಾಜೆ, ಕ್ಷೇತ್ರದ ಸಂಚಾಲಕ ಕೃಷ್ಣಪ್ಪ ಪೂಜಾರಿ ವೇದಿಕೆಯಲ್ಲಿದ್ದರು. ಬಂಟ್ವಾಳ ಸೇವಾ ಸಮಿತಿ ಅಧ್ಯಕ್ಷ ಸಂಜೀವ ಪೂಜಾರಿ, ಕಾರ್ಯದರ್ಶಿ ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಹಾಗೂ ಸಮಿತಿ ಪದಾದಿಕಾರಿಗಳು ಹಾಜರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.