www.bantwalnews.com ವರದಿ
ಗುರುವಾರ ಬಂಟ್ವಾಳ ತಾಲೂಕಿನ ಎರಡು ಕಡೆಗಳಲ್ಲಿ ಅಪಘಾತಗಳು ಸಂಭವಿಸಿವೆ. ಎರಡೂ ಕಡೆಗಳಲ್ಲಿ ದ್ವಿಚಕ್ರವಾಹನ ಸವಾರರು ಗಾಯಗೊಂಡಿದ್ದಾರೆ.
B.C.ROAD
KADUMATA – NEAR VITTLA
ಮೊದಲನೆ ಘಟನೆ ಬಿ.ಸಿ.ರೋಡಿನ ಫ್ಲೈ ಓವರ್ ಮೇಲೆ ಸಂಭವಿಸಿದೆ. ಬೆಳಗ್ಗಿನ ಹೊತ್ತು ಗ್ಯಾಸ್ ಸಾಗಾಟದ ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಗುದ್ದಿ ಅಪಘಾತ ಸಂಭವಿಸಿದ್ದು,ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನೊಂದು ಘಟನೆ ಮಧ್ಯಾಹ್ನ ಸಂಭವಿಸಿದೆ. ವಿಟ್ಲ ಸಮೀಪ ಕಾಡುಮಠ ಸೇತುವೆ ಬಳಿಯ ಅಪಾಯಕಾರಿ ತಿರುವಿನಲ್ಲಿ ಲಾರಿಯೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ, ಸವಾರರಿಬ್ಬರು ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿ.ಸಿ.ರೋಡಿನಲ್ಲಿ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಸುಮಾರು ಒಂದು ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಎರಡೂ ಅಪಘಾತಗಳು ವಾಹನ ಸವಾರರ ಗೊಂದಲದಿಂದ ಸಂಭವಿಸಿದ್ದು, ಬಿ.ಸಿ.ರೋಡಿನಲ್ಲೂ ಬಸ್ ನಿಲ್ಲುವ ಜಾಗದ ಬಳಿ ಸವಾರರಿಗೆ ಗೊಂದಲ ನಿರ್ಮಾಣವಾಗುತ್ತದೆ. ಕಾಡುಮಠದಲ್ಲೂ ಅಪೂರ್ಣ ಕಾಮಗಾರಿ ಸವಾರರಿಗೆ ಗೊಂದಲ ಉಂಟುಮಾಡುವಂತಿತ್ತು.