ಸಾಧಕರು

ರಾಷ್ಟ್ರಮಟ್ಟದ ಕಾರ್ಟೂನ್ ನಲ್ಲಿ ಮುಕೇಶ್ ವ್ಯಂಗ್ಯಚಿತ್ರ ತೃತೀಯ

www.bantwalnews.com

CONGRATS MUKESH

ಜಾಹೀರಾತು

ಎರಡನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂಭ್ರಮದಲ್ಲಿರುವ ಬಂಟ್ವಾಳನ್ಯೂಸ್ www.bantwalnews.com ಗೆ ಮತ್ತೊಂದು ಖುಷಿ. ಲೇಖನಗಳೊಂದಿಗೆ ಯಾವುದೇ ಅಬ್ಬರವಿಲ್ಲದೆ ಬಂಟ್ವಾಳನ್ಯೂಸ್ ಮೊದಲ ವರ್ಷವನ್ನು ಯಶಸ್ವಿಯಾಗಿಯೇ ಮುಗಿಸಿದ ಸವಿನೆನಪಿಗೆ ಬಂಟ್ವಾಳನ್ಯೂಸ್ ಗಾಗಿ ನಮ್ಮೂರಿನವರೇ ಆದ ಮುಕೇಶ್ ರಾವ್, ವ್ಯಂಗ್ಯಚಿತ್ರವನ್ನು ಒದಗಿಸಿದ್ದು ಪ್ರಕಟಗೊಂಡಿದ್ದವು. ವ್ಯಂಗ್ಯನೋಟಕ್ಕಾಗಿ ಅವರು ಒದಗಿಸಿದ ಕಾರ್ಟೂನ್ ಒಂದು ರಾಷ್ಟ್ರೀಯ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದೆ. ಅಭಿನಂದನೆಗಳು ಮುಖೇಶ್ ಅವರಿಗೆ.

  • ಹರೀಶ ಮಾಂಬಾಡಿ, ಸಂಪಾದಕ.

 

ಮುಖೇಶ್ ರಾವ್ ಕುರಿತು:

ಬಂಟ್ವಾಳದವರಾದ ಮುಕೇಶ್ ರಾವ್ ಸದ್ಯ ಯು.ಎಸ್.ಎ.ಯ Seattle ನಲ್ಲಿ ವೃತ್ತಿ ಸಂಬಂಧವಾಗಿ ನೆಲೆಸಿದ್ದಾರೆ. ಎಸ್.ವಿ.ಎಸ್. ವಿದ್ಯಾಗಿರಿ, ಎಸ್.ವಿ.ಎಸ್. ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪಡೆದ ಬಳಿಕ ಆರ್.ವಿ. ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಉದ್ಯೋಗವನ್ನರಸಿ ತೆರಳಿದ್ದು ಯು.ಎಸ್.ಎ.ಗೆ
3ನೇ ವಯಸ್ಸಿನಲ್ಲಿ ಮನೆಯ ನೆಲದ ಮೇಲೆ ಅಜ್ಜನ ಜೊತೆ ಬಸ್ಸು ಕಾರುಗಳ ಚಿತ್ರಗಳನ್ನು ಬರೆಯಲು ಪ್ರಾರಂಭಿಸಿದ್ದ ಮುಕೇಶ್ ಗೆ ಚಿತ್ರ  ಬಿಡಿಸುವುದು ಎಂದರೆ ಪಂಚಪ್ರಾಣ. ಇದಲ್ಲದೆ ಪುಸ್ತಕಗಳನ್ನು ಓದುವುದು, ಹೊರಾಂಗಣ ಆಟಗಳನ್ನಾಡುವುದು, ಪ್ರಪಂಚ ಪರ್ಯಟನೆ ಇತರ ಹವ್ಯಾಸಗಳು. ಅವರ ಸಂಪರ್ಕ:

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts