ಸುಳ್ಯದ ಶಾಸಕರಾಗಿ 1983ರಲ್ಲಿ ಆಯ್ಕೆಗೊಂಡಿದ್ದ ಬಾಕಿಲ ಹುಕ್ರಪ್ಪ ನಿಧನ ಹೊಂದಿದ್ದಾರೆ. ಅವರು 1983 ರಿಂದ 85ರವರೆಗೆ ಸುಳ್ಯದ ಶಾಸಕರಾಗಿದ್ದರು. ಜನತಾ ದಳ, ಕಾಂಗ್ರೆಸ್, ಕೆಸಿಪಿ ಸಹಿತ ಹಲವು ಪಕ್ಷಗಳಲ್ಲಿ ದುಡಿದಿದ್ದ ಅವರು ಇತ್ತೀಚೆಗೆ ಆಮ್ ಆದ್ಮಿ ಪಕ್ಷ ಸೇರಿದ್ದರು.
ಬಾಕಿಲ ಹುಕ್ರಪ್ಪನವರು 1983ರಲ್ಲಿ ಭಾರತೀಯ ಜನತಾ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾಗ ಅಡಿಕೆ ತೋಟದಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು. 1985ರಲ್ಲಿ ಸೋತು, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಸೋತ ನಂತರ ರಬ್ಬರ್ ಪ್ಲಾಂಟೇಷನ್ ನಲ್ಲಿ ದಿನಗೂಲಿ ನೌಕರರಾಗಿ ದುಡಿದಿದ್ದರು.