ಶಂಭೂರು ಶ್ರೀ ಷಣ್ಮುಖ ಸುಬ್ರಾಯ ದೇವರ ಸನ್ನಿಧಿಯಲ್ಲಿ ನ.24ರಂದು ಶುಕ್ರವಾರ ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ಷಷ್ಠಿ ಮಹೋತ್ಸವ ನಡೆಯಲಿದೆ.
ಈ ಪ್ರಯುಕ್ತ 23ನೇ ಗುರುವಾರ ಬೆಳಿಗ್ಗೆ ಗಂಟೆ 10ಕ್ಕೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, 12 ತೆಂಗಿನ ಕಾಯಿ ಗಣಹೋಮ ಮದ್ಯಾಹ್ನ ಗಂಟೆ 11.30ಕ್ಕೆ ನಾಗ ತಂಬಿಲ,ಗಂಟೆ 12ಕ್ಕೆ ಮಹಾಪೂಜೆ, ಸಂಜೆ ಗಂಟೆ ೭ಕ್ಕೆ ಶ್ರೀ ದೇವರ ಸನ್ನಿಧಿಯಲ್ಲಿ ನಾಗ ದೇವರ ವಿಶೇಷ ಪೂಜೆ, ರಾತ್ರಿ ಗಂಟೆ 8ಕ್ಕೆ ಪಂಚಮಿ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
24ರಂದು ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ಷಷ್ಠಿ ಮಹೋತ್ಸವ ನಡೆಯಲಿದ್ದು, ಬೆಳಿಗ್ಗೆ ಗಂಟೆ 10ಕ್ಕೆ ಸಿಯಾಳ ಅಭಿಷೇಕ, ಗಂಟೆ 11ರಿಂದ ಪವಮಾನ ಅಭಿಷೇಕ, 11.30ಕ್ಕೆ ನಾಗ ತಂಬಿಲ, ಗಂಟೆ 12ಕ್ಕೆ ಮಹಾಪೂಜೆ ,ಮದ್ಯಾಹ್ನ ಗಂಟೆ ೧ಕ್ಕೆ ಅನ್ನ ಸಂತರ್ಪಣೆ ಜರಗಲಿದೆ. ಭಗವದಭಕ್ತರು ಹೆಚ್ಚಿ ಸಂಖ್ಯೆಯಲ್ಲಿ ಈ ಪುಣ್ಯ ಕಾರ್‍ಯದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗ ಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ .ಅಶ್ವಿನ್ ರಾವ್ ಶಂಬೂರು ತಿಳಿಸಿದ್ದಾರೆ.