• Dr. A.G.Ravishankar

www.bantwalnews.com

ಕಾಯಿ ಹಾಲು ದನದ ಹಾಲಿನಂತೆಯೇ ಸತ್ವಭಾರಿತವಾಗಿದ್ದು ಹಲವಾರು ಸಂದರ್ಭಗಳಲ್ಲಿ ಹಾಲಿನಂತೆಯೇ ಕಾರ್ಯ ನಿರ್ವಹಿಸುತ್ತದೆ ಮತ್ತು ಹಾಲಿನ ಬದಲಿಗೆ ಇದನ್ನೇ ಬಳಸುತ್ತಾರೆ.

  1. ಕಾಯಿ ಹಾಲು ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಮಲ ಬದ್ಧತೆಯನ್ನು ನಿವಾರಿಸುತ್ತದೆ.
  2. ಇದು ಶರೀರದಲ್ಲಿ ರಕ್ತ ಪರಿಚಲನೆಯನ್ನು ಉತ್ತೆಜಿಸುವುದರ ಮೂಲಕ ಶರೀರದ ಅಂಗಗಳಿಗೆ ಪೋಷಕಾಂಶಗಳನ್ನು ಒದಗಿಸಲು ಸಹಕರಿಸುತ್ತದೆ ಮತ್ತು ಶಕ್ತಿಯನ್ನು ನೀಡುತ್ತದೆ .
  3. ಹೊಟ್ಟೆ ಹಾಗು ಕರುಳಿನಲ್ಲಿ ಹುಣ್ಣು ಆಗಿದ್ದರೆ ಕಾಯಿ ಹಾಲು ಕುಡಿಯುವುದರಿಂದ ಹುಣ್ಣು ವಾಸಿಯಾಗುತ್ತದೆ.
  4. ಕಾಯಿ ಹಾಲಿನಲ್ಲಿ ಯಥೇಷ್ಟವಾಗಿ ಕ್ಯಾಲ್ಸಿಯಂ ಹಾಗು ಫಾಸ್ಫರಸ್ ಇರುವುದರಿಂದ ಇದು ಮೂಳೆಗಳನ್ನು ದೃಢಗೊಳಿಸುತ್ತದೆ.
  5. ಕಾಯಿ ಹಾಲು ಶರೀರದಲ್ಲಿ ರಕ್ತ ಹೀನತೆಯನ್ನು ಕಡಿಮೆಗೊಳಿಸುತ್ತದೆ.
  6. ಕಾಯಿ ಹಾಲಿನಲ್ಲಿರುವ ಲಾರಿಕ್ ಆಮ್ಲವು ಹೃದಯಕ್ಕೆ ಬಲವನ್ನು ನೀಡುತ್ತದೆ ಮತ್ತು ಕೆಟ್ಟ ಕೊಬ್ಬನ್ನು ನಿವಾಆರಿಸುತ್ತದೆ.
  7. ಇದು ಶರೀರದಲ್ಲಿ ಇನ್ಸುಲಿನ್ ಉತ್ಪತ್ತಿಯನ್ನು ಪ್ರಚೋದಿಸುವುದರ ಮೂಲಕ ಮಧುಮೇಹವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
  8. ಕಾಯಿ ಹಾಲು ವಯಸ್ಕರಲ್ಲಿ ಕಾಣುವ ಮರೆಗುಳಿ ರೋಗವನ್ನು ಹತೋಟಿಗೆ ತರಲು ಸಹಕರಿಸುತ್ತದೆ.
  9. ಕಾಯಿ ಹಾಲನ್ನು ಶರೀರದ ಮೇಲೆ ಹಚ್ಚುವುದರಿಂದ ಮತ್ತು ಕುಡಿಯುವುದರಿಂದ ಚರ್ಮಕ್ಕೆ ಸ್ನಿಗ್ಧತೆ ಮತ್ತು ಕಾಂತಿಯನ್ನು ನೀಡುತ್ತದೆ.
  10. ಕಾಯಿಹಾಲು ಹಚ್ಚುವುದರಿಂದ ಸೂರ್ಯನ ಕಿರಣದಿಂದಾದ ಚರ್ಮದ ತೊಂದರೆಯನ್ನು (sun burn ) ಹೋಗಲಾಡಿಸಬಹುದು.
  11. ಕಾಯಿಹಾಲನ್ನು ತಲೆಗೆ ಹಚ್ಚುವುದರಿಂದ ಕೂದಲು ನುಣುಪಾಗುತ್ತದೆ ಮತ್ತು ಕಾಂತಿಯುತವಾಗುತ್ತದೆ.
  12. ಮುಖದಲ್ಲಿ ಮೊಡವೆಗಳು ಮೂಡಿದಾಗ ಕಾಯಿಹಾಳನ್ನು ಮುಖಕ್ಕೆ ಹಚ್ಚಬೇಕು.
  13. ಕಾಯಿಹಾಲು ಪುರುಷರಲ್ಲಿ ಇರುವ ಪೌರುಷ ಗ್ರಂಥಿಯ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಅದರ ಕ್ಯಾನ್ಸರ್ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
  14. ಸಂಧುಗಳು ಶಬ್ದ ಭರಿತವಾಗಿ ನೋವಿನಿಂದ ಕೂಡಿದ್ದರೆ ಕಾಯಿಹಾಲನ್ನು ಹಚ್ಚಬೇಕು. ಇದರಿಂದ ನೋವು ಕಡಿಮೆಯಾಗುತ್ತದೆ.
  15. ನಿಯಮಿತವಾಗಿ ಕಾಯಿಹಾಲನ್ನು ಕುಡಿಯುವುದರಿಂದ ವ್ಯಾಧಿ ಕ್ಷಮತ್ವವು ಅಧಿಕವಾಗುತ್ತದೆ.
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.

Recent Posts