www.bantwalnews.com ವರದಿ
ರಾಜ್ಯ ಸರಕಾರ ಹೊರತರಲಿರುವ ಕಾಯ್ದೆಯನ್ನು ವಿರೋಧಿಸಿ ಇಂಡಿಯನ್ ಮೆಡಿಕಲ್ ಎಸೋಸಿಯೇಶನ್ ವೈದ್ಯರು ರಾಜ್ಯಾದ್ಯಂತ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬಂಟ್ವಾಳ ತಾಲೂಕಿನ ಆಯುಷ್ (ಆಯುರ್ವೇದ) ವೈದ್ಯರು ಬೆಂಬಲ ಸೂಚಿಸಿದ್ದಾರೆ.
ಈ ಕುರಿತು ಬಿ.ಸಿ.ರೋಡಿನಲ್ಲಿ ಬುಧವಾರ ತುರ್ತು ಸಭೆ ನಡೆಸಿದ ವೈದ್ಯರು ಗುರುವಾರದಿಂದ ಮುಂದಿನ ಸೂಚನೆವರೆಗೆ ದವಾಖಾನೆಗಳನ್ನು ಬಂದ್ ಮಾಡುವ ಕುರಿತು ತೀರ್ಮಾನಿಸಲಾಗಿದೆ ಎಂದು ಆಯುಷ್ ತಾಲೂಕು ಅಧ್ಯಕ್ಷ ಡಾ. ಶಿವಪ್ರಸಾದ ಶೆಟ್ಟಿ ಮತ್ತು ಕಾರ್ಯದರ್ಶಿ ಡಾ.ಸುಬ್ರಹ್ಮಣ್ಯ ಟಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.