ಲಯನ್ಸ್ ಸಂಸ್ಥೆಯು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಇರುವ ವಿಭಿನ್ನ ಕಲೆ ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದು ಜಿಲ್ಲಾ ರಾಜ್ಯೋತಸ್ವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ, ಲಯನ್ಸ್ ಜಿಲ್ಲಾ ಪ್ರಥಮ ಉಪರಾಜ್ಯಪಾಲ ಕೆ.ದೇವದಾಸ್ ಭಂಡಾರಿ ಹೇಳಿದ್ದಾರೆ.
ಬಿ.ಸಿ.ರೋಡ್ನಲ್ಲಿ ಲಯನ್ಸ್ ಕ್ಲಬ್ಬಿನ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ಲಯನ್ಸ್ ಯಕ್ಷ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಸಾಧ್ಕರನ್ನು ಸನ್ಮಾನಿಸಿ ಮಾತನಾಡಿದರು.
ಇದೇ ವೇಳೆ ಹಿರಿಯ ಯಕ್ಷಗಾನ ಕಲಾವಿದ ದಿವಂಗತ ಚಿಟ್ಟಾಣಿ ರಾಮಚಂದ್ರ ಹೆಗ್ಡೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಎಲ್ಲೈಸಿ ನಿವೃತ್ತ ಅಭಿವೃದ್ಧಿ ಅಧಿಕಾರಿ ಎನ್.ಎಸ್.ಹೆಗ್ಡೆ ಮತ್ತು ಯಕ್ಷಗಾನ ಕಲಾವಿದ ಧನಂಜಯ ಪೊಳಲಿ ಇವರನ್ನು ಸನ್ಮಾನಿಸಲಾಯಿತು. ಲಯನ್ಸ್ ಯಕ್ಷಗಾನ ಜಿಲ್ಲಾ ಸಂಯೋಕ ಬಿ.ಸಂಜೀವ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲಾ ಸಂಪುಟ ಕಾರ್ಯದರ್ಶಿ ವಸಂತ ಕುಮಾರ್ ಶೆಟ್ಟಿ , ಲಯನ್ಸ್ ಕ್ಲಬ್ ಅಧ್ಯಕ್ಷ ಜಗದೀಶ ಎಡಪಡಿತ್ತಾಯ ಮಾತನಾಡಿದರು. ಲಯನ್ ಸ್ಥಾಪಕಾಧ್ಯಕ್ಷ ಡಾ. ವಸಂತ ಬಾಳಿಗ, ಚಿತ್ರಾ ಜೆ. ಯಡಪಡಿತ್ತಾಯ, ಲಯನ್ಸ್ ಯಕ್ಷಗಾನ ಜಿಲ್ಲಾಧ್ಯಕ್ಷ ಎಂ.ಸುಂದರ ಶೆಟ್ಟಿ, ವಲಯಾಧ್ಯಕ್ಷ ಬಿ.ಶಿವಾನಂದ ಬಾಳಿಗ, ಪ್ರಮುಖರಾದ ದಾಮೋದರ ಬಿ.ಎಂ., ಪುಷ್ಪರಾಜ್ ಶೆಟ್ಟಿ, ಸತ್ಯನಾರಾಯಣ ರಾವ್ ಮತ್ತಿತರರು ಇದ್ದರು.
ಲಯನ್ಸ್ ಕ್ಲಬ್ಬಿನ ಮಾಜಿ ಅಧ್ಯಕ್ಷ ಮಧ್ವರಾಜ ಕಲ್ಮಾಡಿ ಸ್ವಾಗತಿಸಿ, ಸದಸ್ಯ ದಿನೇಶ್ ಮಾಮೇಶ್ವರ ವಂದಿಸಿದರು. ಸಭಾ ಕಾರ್ಯಕ್ರಮ ಬಳಿಕ ಕರ್ಣಾರ್ಜುನ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಿತು. ಕಲಾವಿದರಾದ ಗಿರೀಶ್ ರೈ ಕಕ್ಯಪದವು, ವಿನಯ ಆಚಾರ್ಯ ಕಡಬ, ಉಜಿರೆ ಅಶೋಕ ಭಟ್, ಶಂಭು ಶರ್ಮ, ರಾಧಾಕೃಷ್ಣ ಕಲ್ಚಾರ್, ಗಣೇಶ್ ಕನ್ನಡಿಕಟ್ಟೆ ಮೊದಲಾದವರು ಭಾಗವಹಿಸಿದ್ದರು.