ಪುಂಜಾಲಕಟ್ಟೆ

ದಾರಿ ಕೇಳುವ ನೆಪದಲ್ಲಿ ಚಿನ್ನದ ಸರ ಕಸಿದು ಪರಾರಿ

www.bantwalnews.com

ರಾಯಿ ಸಮೀಪದ ಕೈತ್ರೋಡಿ ಗ್ರಾಮೀಣ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಮಹಿಳೆಯಲ್ಲಿ ದಾರಿ ಕೇಳುವ ನೆಪದಲ್ಲಿ ಅಪರಿಚಿತ ಬೈಕ್ ಸವಾರರಿಬ್ಬರು ಮಹಿಳೆ ಕತ್ತಿನಿಂದ ಚಿನ್ನದ ಸರ ಎಗರಿಸಿ ಪರಾರಿಯಾದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.

ಜಾಹೀರಾತು

ಇಲ್ಲಿನ ಕೊಯಿಲ ಗ್ರಾಮದ ಕೈತ್ರೋಡಿ ಕ್ವಾರ್ಟರ್ಸ್ ನಿವಾಸಿ ದಿವಂಗತ ಜಯ ಶೆಟ್ಟಿ ಎಂಬವರ ಪತ್ನಿ ನೇತ್ರಾವತಿ ಶೆಟ್ಟಿ ಅವರು ಮಂಗಳವಾರ ಮಧ್ಯಾಹ್ನ ಔಷಧಿ ತರಲೆಂದು ಸಿದ್ಧಕಟ್ಟೆಗೆ ತೆರಳಿ ರಾಯಿ ಪೇಟೆಗೆ ಬಸ್ಸಿನಲ್ಲಿ ವಾಪಾಸು ಬಂದಿದ್ದಾರೆ. ಇದೇ ವೇಳೆ ಸ್ಥಳೀಯ ನಿವಾಸಿ ಲೀಲಾ ಅಣ್ಣಪ್ಪ ಗೌಡ ಅವರೊಂದಿಗೆ ಮಧ್ಯಾಹ್ನ ಸುಮಾರು 1 ಗಂಟೆಗೆ ರಾಯಿ ಪೇಟೆಯಿಂದ ಕೈತ್ರೋಡಿ ಕ್ವಾರ್ಟರ್ಸ್ ಮನೆಗೆ ಡಾಂಬರು ರಸ್ತೆಯಲ್ಲಿ ನಡೆದುಕೊಂಡು ವಾಪಾಸು ಹೋಗುತ್ತಿದ್ದ ವೇಳೆ ಕೃತ್ಯ ನಡೆದಿದೆ.

ಬಿಳಿ ಬಣ್ಣದ ಜುಪಿಟರ್ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರ ಪೈಕಿ ಒಬ್ಬಾತನು ಮೊಬೈಲ್‌ನಲ್ಲಿ ಮಾತನಾಡುತ್ತಾ ಇವರನ್ನು ಹಿಂಬಾಲಿಸಿಕೊಂಡು ಬಂದು ರಮೇಶ ಮೇಸ್ತ್ರಿ ಮನೆಗೆ ಹೋಗುವ ದಾರಿ ಯಾವುದು ಎಂದು ವಿಚಾರಿಸಿದ್ದಾನೆ. ನೇತ್ರಾವತಿ ಶೆಟ್ಟಿ ಅವರು ತನಗೆ ಗೊತ್ತಿಲ್ಲ ಎಂದು ಹೇಳುತ್ತಿದ್ದಂತೆಯೇ ಅವರ ಕತ್ತಿನಿಂದ ಸುಮಾರು ರೂ 1ಲಕ್ಷ ಮೌಲ್ಯದ ನಾಲ್ಕು ಪವನ್ ತೂಕದ ಚಿನ್ನದ ಸರ ಕಿತ್ತು ಅವರನ್ನು ಪಕ್ಕಕ್ಕೆ ದೂಡಿ ಹಾಕಿ ಹಿಂದೆ ಓಡಿ ಹೋಗಿ ಅಲ್ಲೇ ಕಾದು ನಿಂತಿದ್ದ ದ್ವಿಚಕ್ರ ವಾಹನದಲ್ಲಿ ಸಿದ್ಧಕಟ್ಟೆ ಕಡೆಗೆ ಪರಾರಿಯಾಗಿದ್ದಾರೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts