REPORT
ಬಂಟರ ಸಂಘ ಬಂಟವಾಳ ತಾಲೂಕು ಆಶ್ರಯದಲ್ಲಿ ವಲಯ ಬಂಟರ ಸಂಘಗಳ ಸಹಯೋಗದ ಕ್ರೀಡಾಕೂಟ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಅಧ್ಯಕ್ಷತೆಯಲ್ಲಿ ನಡೆಯಿತು.
ಕ್ರೀಡೋತ್ಸವದ ಆರಂಭದಲ್ಲಿ ನಡೆದ ಬಂಟರ ಪಥಸಂಚಲನದ ಗೌರವ ಧ್ವಜವಂದನೆಯನ್ನು ಸಂಘದ ಅಧ್ಯಕ್ಷರು ಸ್ವೀಕರಿಸಿ ಶುಭ ಸಂದೇಶ ನೀಡಿದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ದೀಪ ಪ್ರಜ್ವಲಿಸಿ ಕ್ರೀಡೋತ್ಸವ ಉದ್ಘಾಟಿಸಿ ಶುಭ ಹಾರೈಸಿದರು. ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಸಂಘದ ಉಪಾಧ್ಯಕ್ಷ ಕಿರಣ್ ಹೆಗ್ಡೆ ಅನಂತಾಡಿ, ಕಾರ್ಯದರ್ಶಿ ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ, ಕೋಶಾಧಿಕಾರಿ ಜಗದೀಶ ಶೆಟ್ಟಿ ಇರಾಗುತ್ತು, ಜತೆಕಾರ್ಯದರ್ಶಿ ನವೀನ್‌ಚಂದ್ರ ಶೆಟ್ಟಿ ಮುಂಡಾಜೆಗುತ್ತು, ಕ್ರೀಡಾ ಸಂಚಾಲಕ ಗಂಗಾಧರ ರೈ ತುಂಗೆರೆಕೋಡಿ, ವಲಯ ಬಂಟರ ಸಂಘದ ಅಧ್ಯಕ್ಷ, ಜಿ.ಪಂ. ಸದಸ್ಯ ಚಂದ್ರಪ್ರಕಾಶ ಶೆಟ್ಟಿ ಉಪಸ್ಥಿತರಿದ್ದರು.
ಕ್ರೀಡೋತ್ಸವದಲ್ಲಿ ಮಾಣಿ ವಲಯವು ಸಮಗ್ರ ಪ್ರಶಸ್ತಿಯನ್ನು , ವಿಟ್ಲ ವಲಯ ರನ್ನರ್‌ಅಪ್ ಪ್ರಶಸ್ತಿಯನ್ನು ಪಡೆಯಿತು. ತಂಡ ಸ್ಪರ್ಧೆ, ವೈಯಕ್ತಿಕ ಸ್ಪರ್ಧೆ, ಮನರಂಜನಾ ಸ್ಪರ್ಧೆ, ಆದರ್ಶ ದಂಪತಿ ಸ್ಪರ್ಧೆಗಳು ಇದೇ ಸಂದರ್ಭದಲ್ಲಿ ನಡೆಯಿತು.
ಕ್ರೀಡಾಪಟುಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸಮವಸ್ತ್ರದಲ್ಲಿದ್ದು, ಐದು ಸಾವಿರಕ್ಕಿಂತಲೂ ಅಕ ಬಂಟರು ಕ್ರೀಡಾಕೂಟ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ತಾಲೂಕಿನ ಬಂಟ ಸಮಾಜದ ದೈಹಿಕ ಶಿಕ್ಷಣ ಶಿಕ್ಷಕರು ಕ್ರೀಡೋತ್ಸವ ತೀರ್ಪುಗಾರರಾಗಿ ಸಹಕರಿಸಿದರು.
ಸಂಜೆ ನಡೆದ ಸಮಾರೋಪದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಸಭಾ ವೇದಿಕೆಯಿಂದ ವಿಜೇತರಿಗೆ ಬಹುಮಾನ ವಿತರಿಸಿದರು. ಶಿಸ್ತುಬದ್ದವಾಗಿ ಕ್ರೀಡಾಕೂಟದ ಆಯೋಜಿಸಿದ್ದಕ್ಕಾಗಿ ಅಭಿನಂದಿಸಿದರು. ಕಂಬಳ ಕ್ಷೇತ್ರದ ಸಾಧಕರಾದ ಸಾಲೆತ್ತೂರು ಬದಿಯಡ್ಕ ಚಂದ್ರಹಾಸ ರೈ, ಪಡ್ಡೆಯೂರುಗುತ್ತು ರಘು ಶೆಟ್ಟಿ, ಸಂಜೀವ ಶೆಟ್ಟಿ ಮಾಣಿ, ಅಂತರಾಷ್ಟ್ರೀಯ ಕ್ರೀಡಾಪಟು ತೇವು ಸದಾನಂದ ಆಳ್ವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ರಾಜ್ಯ ರಾಷ್ಟ್ರಮಟ್ಟದ ಕ್ರೀಡಾಪಟುಗಳಾಗಿ ಗುರುತಿಸಿಕೊಂಡ ಹದಿನಾರು ಮಂದಿಯನ್ನು ಗೌರವಿಸಲಾಯಿತು.
ಮಾಣಿಮಾಲ ಬಿ. ಶೆಟ್ಟಿ ಸಮಾರೋಪ ಪ್ರಾರ್ಥನೆ ನಡೆಸಿಕೊಟ್ಟರು. ಬಾಲಕೃಷ್ಣ ಆಳ್ವ ಕೊಡಾಜೆ, ನ್ಯಾಯವಾದಿ ಆಶಾಪ್ರಸಾದ್ ರೈ ಕಾರ್ಯಕ್ರಮ ನಿರ್ವಹಿಸಿದರು.