ಜಿಲ್ಲಾ ಸುದ್ದಿ

ಪುತ್ತೂರಿನಲ್ಲಿ ನ.17ರಿಂದ ಚಲನಚಿತ್ರ ಸಪ್ತಾಹ

www.bantwalnews.com

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ರಾಜ್ಯ ಮತ್ತು ರಾಷ್ಟ್ರ ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರಗಳ ಪ್ರದರ್ಶನದ ಅಂಗವಾಗಿ ಚಲನಚಿತ್ರ ಸಪ್ತಾಹವನ್ನು ನವೆಂಬರ್ 17 ರಿಂದ 23 ರವರೆಗೆ ಪ್ರತೀದಿನ ಬೆಳಿಗ್ಗೆ 9ಗಂಟೆಗೆ ಪುತ್ತೂರಿನ ಅರುಣ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿದೆ.
ಚಲನಚಿತ್ರ ಸಪ್ತಾಹದಲ್ಲಿ ನವೆಂಬರ್ 17 ರಂದು ರಾಜ್ಯ ಪ್ರಶಸ್ತಿ ವಿಜೇತ ಚಿತ್ರ ‘ಅಮರಾವತಿ’, ನವೆಂಬರ್ 18 ರಂದು ರಾಜ್ಯ ಪ್ರಶಸ್ತಿ ವಿಜೇತ  ಚಲನಚಿತ್ರ ‘ಕಿರಿಕ್ ಪಾರ್ಟಿ’, ನವೆಂಬರ್ 19 ರಂದು ರಾಜ್ಯ ಪ್ರಶಸ್ತಿ ವಿಜೇತ  ಚಲನಚಿತ್ರ ‘ರಾಮ ರಾಮ ರೇ’,  ನವೆಂಬರ್ 20 ರಂದು ರಾಜ್ಯ ಪ್ರಶಸ್ತಿ ವಿಜೇತ  ತುಳು ಚಲನಚಿತ್ರ  ‘ಮದಿಪು’, ನವೆಂಬರ್ 21 ರಂದು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ  ಚಲನಚಿತ್ರ ‘ಯೂಟರ್ನ್’, ನವೆಂಬರ್ 22 ರಂದು ರಾಜ್ಯ ಪ್ರಶಸ್ತಿ ವಿಜೇತ  ಚಲನಚಿತ್ರ ‘ಅಲ್ಲಮ’,  ನವೆಂಬರ್ 23 ರಂದು ರಾಜ್ಯ ಪ್ರಶಸ್ತಿ ವಿಜೇತ  ಚಲನಚಿತ್ರ, ‘ಮಾರಿಕೊಂಡವರು’ ಪ್ರದರ್ಶನಗೊಳ್ಳಲಿದೆ.
ಚಲನಚಿತ್ರ ಸಪ್ತಾಹವನ್ನು ನವೆಂಬರ್ 17 ರಂದು ಬೆಳಿಗ್ಗೆ 9 ಗಂಟೆಗೆ ಪುತ್ತೂರು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡ್ ಚಲನಚಿತ್ರ ಸಪ್ತಾಹ ಉದ್ಘಾಟಿಸುವರು.  ಚಿತ್ರ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಬಿ.ಎ.ಖಾದರ್ ಶಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಹೀರಾತು
ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts