ಕಲ್ಲಡ್ಕ ಸಮೀಪ ಗೋಳ್ತಮಜಲು ಸರ್ಕಾರಿ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ಶನಿವಾರ ಆಚರಿಸಲಾಯಿತು.
ಶಾಲಾ ಮುಖ್ಯ ಶಿಕ್ಷಕ ಸೀತಾರಾಮ್ ಭಟ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿಯೊಬ್ಬನಿಗೂ ಶಿಕ್ಷಕ ಅತೀ ಅವಶ್ಯಕವಾಗಿದೆ. ಶಿಕ್ಷಣ ಪಡೆಯುವುದರ ಉದ್ದೇಶ ಕೇವಲ ಹಣ ಸಂಪಾದನೆ ಮಾಡುವುದಲ್ಲ. ಶಿಕ್ಷಣದ ಮೂಲಕ ದೇಶಕ್ಕೆ ಸೇವೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ದೇಶದ ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿ ಜೀವನದಿಂದಲೇ ವಿಶೇಷ ಕಾಳಜಿ ವಹಿಸಬೇಕು. ಬಾಳ್ಯದಿಂದಲೇ ಉತ್ತಮ ಗುಣ ನಡತೆಗಳನ್ನು ಮೈಗೂಡಿಸಿಕೊಂಡಾಗ ಸತ್ಪ್ರಜೆಯಾಗಿ ಬದುಕಲು ಸಾಧ್ಯ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತ ಮಹಮ್ಮದ್ ಅಲಿ ವಿಟ್ಲ ಅವರು ಶಿಕ್ಷಣದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ಸಂದರ್ಭ ಶಾಲಾ ಶಿಕ್ಷಕರಾದ ವಿದ್ಯಾಲತಾ, ಪ್ರಭಾಕರ್ ಶೆಟ್ಟಿ, ಮಂಜುಳಾ, ಸಹ ಶಿಕ್ಷಣಾರ್ಥಿಗಳಾದ ದೀಕ್ಷಾ, ಬಿಂದ್ಯಾಶ್ರೀ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಸೀತಾರಾಮ್ ಭಟ್ ಸ್ವಾಗತಿಸಿದರು. ಶಿಕ್ಷಕಿ ಮ್ಯಾಗ್ನೇಟ್ ಮರ್ಲಿನ್ ಡಿ ಸೋಜ ನಿರೂಪಿಸಿದರು. ಸುಜಾತ ವಂದಿಸಿದರು.