ನವಕರ್ನಾಟಕ ಪರಿವರ್ತನಾ ಯಾತ್ರೆಯ ಬಂಟ್ವಾಳದಲ್ಲಿ ನಾಳೆ ನಡೆಯಲಿರುವ ಸಮಾವೇಶದಲ್ಲಿ ಉಟೋಪಚಾರ ವ್ಯವಸ್ಥೆಗೆ ಉಗ್ರಾಣ ಮುಹೂರ್ತವನ್ನು ಬಂಟ್ವಾಳ ಬಿಜೆಪಿ ಮುಖಂಡರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನೆರವೇರಿಸಿದರು.
ಬಂಟ್ವಾಳನ್ಯೂಸ್ ವರದಿ
ನವ ಕರ್ನಾಟಕ ನಿರ್ಮಾಣಕ್ಕಾಗಿ ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆಸುತ್ತಿರುವ ನವಕರ್ನಾಟಕ ಪರಿವರ್ತನಾ ಯಾತ್ರೆ ಬಂಟ್ವಾಳ ಕ್ಷೇತ್ರಕ್ಕೆ ಶನಿವಾರ ಬೆಳಗ್ಗೆ 9 ಗಂಟೆಗೆ ಆಗಮಿಸಲಿದೆ. ಪುಂಜಾಲಕಟ್ಟೆಯಿಂದ ಬಂಟ್ವಾಳ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಬಳಿ ಇರುವ ಮೈದಾನದಲ್ಲಿ ಬೆಳಗ್ಗೆ ಸುಮಾರು 11ರ ವೇಳೆ ಸಮಾವೇಶ ನಡೆಯುವುದು.
ನವಕರ್ನಾಟಕ ಪರಿವರ್ತನಾ ಯಾತ್ರೆಯ ಬಂಟ್ವಾಳದಲ್ಲಿ ನಾಳೆ ನಡೆಯಲಿರುವ ಸಮಾವೇಶದಲ್ಲಿ ಉಟೋಪಚಾರ ವ್ಯವಸ್ಥೆಗೆ ಉಗ್ರಾಣ ಮುಹೂರ್ತವನ್ನು ಬಂಟ್ವಾಳ ಬಿಜೆಪಿ ಮುಖಂಡರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ನೆರವೇರಿಸಿದರು.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅಥವಾ ಪಕ್ಷದ ಪ್ರಮುಖ ನಾಯಕರು ಯಡಿಯೂರಪ್ಪ ಜೊತೆ ಆಗಮಿಸುವ ನಿರೀಕ್ಷೆ ಇದ್ದು, ಕಾರ್ಯಕರ್ತರು ಈಗಾಗಲೇ ಸಮಾವೇಶ ನಡೆಯುವ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ಇರುವ ವಿಶಾಲವಾದ ಮೈದಾನದಲ್ಲಿ ಸಮಾವೇಶಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.
ಬಂಟ್ವಾಳ ಕ್ಷೇತ್ರದ ಬಿಜೆಪಿ ಮುಖಂಡ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಕ್ಷೇತ್ರಾಧ್ಯಕ್ಷ ದೇವದಾಸ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಬೃಹತ್ ವೇದಿಕೆ , ಚಪ್ಪರದ ವ್ಯವಸ್ಥೆ ಸಹಿತ ಸಕಲ ಸಿದ್ಧತೆಗಳು ನಡೆದಿವೆ.
ಬೆಳ್ತಂಗಡಿಯಿಂದ ಬಂಟ್ವಾಳಕ್ಕಾಗಮಿಸುವ ಯಾತ್ರೆಯನ್ನು ಪುಂಜಾಲಕಟ್ಟೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಲಿದ್ದಾರೆ.
ಯಾತ್ರೆಯು ವಗ್ಗ ಮಾರ್ಗವಾಗಿ ಬಂಟ್ವಾಳ ನಗರದ ಮೂಲಕ ಬಿ.ಸಿ.ರೋಡಿನ ಸಮಾವೇಶ ಮೈದಾನದಲ್ಲಿ ಸಂಪನ್ನಗೊಳ್ಳಲಿದೆ.
FORE DETAILS READ:
AND