ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆಯ ವತಿಯಿಂದ ಲಯನ್ಸ್ ಯಕ್ಷ ಸಂಭ್ರಮ ಕಾರ್ಯಕ್ರಮ ನ.12ರಂದು ಸಂಜೆ ೪ಗಂಟೆಗೆ ಬಿ.ಸಿ.ರೋಡಿನ ರಂಗೋಲಿ ಹೊಟೇಲ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಲಯನ್ಸ್ ಯಕ್ಷಗಾನ ಜಿಲ್ಲಾ ಸಂಯೋಜಕ ಬಿ.ಸಂಜೀವ ಶೆಟ್ಟಿ ಹೇಳಿದ್ದಾರೆ.
ಬಿ.ಸಿ.ರೋಡ್‌ನ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಮಾತನಾಡಿದ ಅವರು, ಲಯನ್ಸ್ ಜಿಲ್ಲಾ ಪ್ರಥಮ ಉಪರಾಜ್ಯಪಾಲ ಕೆ.ದೇವದಾಸ್ ಭಂಡಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.
ಸಭಾ ಕಲಾಪದ ನಂತರ ಕರ್ಣಾಜುನ ಪ್ರಸಂಗದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಕೀರ್ತಿಶೇಷ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುವುದು. ಎಲ್‌ಐಸಿಯ ನಿವೃತ್ತ ಅಧಿಕಾರಿ ಎನ್.ಎಸ್. ಹೆಗ್ಡೆ ಹಾಗೂ ಯಕ್ಷಗಾನ ಕಲಾವಿದ ಧನಂಜಯ ಪೊಳಲಿ ಅವರನ್ನು ಇದೇ ವೇಳೆ ಸನ್ಮಾನಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಲಯನ್ಸ್ ಕ್ಲಬ್‌ನ ಬಂಟ್ವಾಳ ಘಟಕದ ಅಧ್ಯಕ್ಷ ಜಗದೀಶ ಯಡಪಡಿತ್ತಾಯ, ಯಕ್ಷಗಾನಕ್ಕೆ ಸಂಬಂಧಿಸಿ ಲಯನ್ಸ್ ಜಿಲ್ಲಾ ಚೇಯರ ಪರ್ಸನ್ ಎಂ.ಸುಂದರ ಶೆಟ್ಟಿ, ಲಯನ್ಸ್ ವಲಯಾಧ್ಯಕ್ಷ ಶಿವಾನಂದ ಬಾಳಿಗಾ, ಪುಷ್ಪರಾಜ ಶೆಟ್ಟಿ, ಜಯಂತ ಶೆಟ್ಟಿ, ಸತ್ಯನಾರಾಯಣ ರಾವ್, ಮಧ್ವರಾಜ್ ಕಲ್ಮಾಡಿ ಉಪಸ್ಥಿತರಿದ್ದರು.
VIDEO REPORT: