ಬಂಟ್ವಾಳ

ಪರಿವರ್ತನಾ ಯಾತ್ರೆ, ಪೂರ್ವತಯಾರಿ ಸಭೆ

www.bantwalnews.com


ನ.11ರಂದು ಬಿ.ಸಿ.ರೋಡಿನಲ್ಲಿ ನಡೆಯುವ ಪರಿವರ್ತನಾ ಯಾತ್ರೆಯ ಪೂರ್ವಭಾವಿ ತಯಾರಿ ದೃಷ್ಟಿಯಿಂದ ಬಿಜೆಪಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾದ ಸಭೆ ಬಿ.ಸಿ.ರೋಡಿನ ಪಕ್ಷದ ಕಚೇರಿಯಲ್ಲಿ ನಡೆಯಿತು.

ಸಭೆಯಲ್ಲಿ ಪಕ್ಷದ ಪ್ರಮುಖರಾದ ರಾಜೇಶ್ ನಾಕ್ ಉಳಿಪಾಡಿಗುತ್ತು ಉಪಸ್ಥಿತರಿದ್ದರು. ಮಹಿಳಾ ಮೋರ್ಚಾದ ಅಧ್ಯಕ್ಷೆ ನಳಿನಿ ಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪರಿವರ್ತನಾ ಯಾತ್ರೆಯ ವಿವಿಧ ತಯಾರಿಯ ಬಗ್ಗೆ ಬಿ.ದೇವದಾಸ ಶೆಟ್ಟಿ ಮಾಹಿತಿಯನ್ನು ನೀಡಿದರು.

ಸ್ವಚ್ಚತೆ, ಕುಡಿಯುವ ನೀರಿನ ವ್ಯವಸ್ಥೆ, ಉಟೋಪಾಚಾರ ವ್ಯವಸ್ಥೆಯನ್ನು ಮಹಿಳಾ ಮೋರ್ಚಾದ ಕಡೆಯಿಂದ ನಿರ್ವಹಿಸುವುದೆಂದು ಸಭೆಯಲ್ಲಿ ನಿರ್ಣಯಿಸಲಾಯಿತು. ಉಟೋಪಾಚಾರ ವ್ಯವಸ್ಥೆಗಾಗಿ ಸಭಾಂಗಣದಲ್ಲಿ ೧೫ ಕೌಂಟರ್‌ಗಳನ್ನು ತೆರೆದು ೨೫೦ ಮಹಿಳಾ ಸದಸ್ಯರು ಈ ಕೌಂಟರ್‌ಗಳನ್ನು ನಿರ್ವಹಿಸುವುದೆಂದು ತಿರ್ಮಾನಿಸಲಾಯಿತು. ಜಿಲ್ಲಾ ಮಹಿಳಾ ಮೋರ್ಚಾದ ಕಾರ್ಯದರ್ಶಿ ಭಾರತಿ ಎಸ್ ಚೌಟ, ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಸುಗುಣ ಕಿಣಿ, ಬಂಟ್ವಾಳ ಮಹಿಳಾ ಮೋರ್ಚಾದ ಪ್ರಭಾರಿ ಯಶೋಧಾ ಬಿ, ಮಾಣಿಮಾಲ ಶೆಟ್ಟಿ, ರೂಪ ಎಲ್ ಶೆಟ್ಟಿ, ವಿನುತಾ, ರೇಣುಕಾ ವಿ ಶೆಟ್ಟಿ, ಆಶಾ ಜಯರಾಮ್ ಶೆಟ್ಟಿ, ಶ್ಯಾಮಲ, ಸುದಾ ಎಸ್ ಶೆಟ್ಟಿ, ಚಂದ್ರಾವತಿ ಇನ್ನಿತರು ಪ್ರಮುಖರು ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts