ನಾಟಕ

ಬಿ.ವಿ.ಕಾರಂತ ನಾಟಕೋತ್ಸವ ದಶಮಾನೋತ್ಸವ: ನಾಟಕ, ಯಕ್ಷಗಾನ ಸ್ಪರ್ಧೆ

www.bantwalnews.com

ಕನ್ನಡ ರಂಗಭೂಮಿಯನ್ನು ಜಗದ್ವಿಖ್ಯಾತಗೊಳಿಸಿದ ದಿ| ಬಿ.ವಿ.ಕಾರಂತರ ನೆನಪಿನಲ್ಲಿ ಬಂಟ್ವಾಳ ತಾಲೂಕಿನ ಮಂಚಿಯಲ್ಲಿ ಬಿ.ವಿ.ಕಾರಂತ ರಂಗ ಭೂಮಿಕಾ ಟ್ರಸ್ಟ್ (ರಿ) ಆಶ್ರಯದಲ್ಲಿ ವರ್ಷಂಪ್ರತಿ ಜರಗುತ್ತಿರುವ ಬಿ.ವಿ.ಕಾರಂತರ ನೆನಪಿನ ಮಂಚಿ-ನಾಟಕೋತ್ಸವ ದಶಮಾನೋತ್ಸವದ ಹೊಸ್ತಿಲಲ್ಲಿದೆ.
ಈ ನೆನಪಿನಲ್ಲಿ ವಿದ್ಯಾರ್ಥಿಗಳಿಗೆ ಅಂತರ್ ಕಾಲೇಜು ನಾಟಕ ಹಾಗೂ ತೆಂಕು ತಿಟ್ಟಿನ ಯಕ್ಷಗಾನ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಕಜೆ ರಾಮಚಂದ್ರ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಸೆಂಬರ 24 ಮತ್ತು 25 ರಂದು , ವಿಟ್ಲ ಪದವಿ ಪೂರ್ವ ಕಾಲೇಜಿನ ಸಹಕಾರದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ನಾಟಕ ಸ್ಪರ್ಧೆ ಜರಗಲಿರುವುದು.
ಡಿಸೆಂಬರ್ ತಿಂಗಳ 31 ರಂದು ಕುಕ್ಕಾಜೆ- ಮಂಚಿಯ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಯಕ್ಷಗಾನ ಸ್ಪರ್ಧೆ ಜರಗುವುದು.

ಸ್ಪರ್ಧೆಗಳು ಪೂರ್ವಾಹ್ನ ಗಂಟೆ 9 ರಿಂದ ಸಂಜೆ 7ರ ತನಕ ನಡೆಯಲಿದೆ. ಆಸಕ್ತ ತಂಡಗಳು ಭಾಗವಹಿಸ ಬೇಕೆಂದು ಕೋರಲಾಗಿದೆ. ತಂಡಗಳು, ಅಧ್ಯಕ್ಷರು, ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್(ರಿ), ಮಂಚಿ, ಅಂಚೆ, ಮಂಚಿ, ಬಂಟ್ವಾಳ ತಾಲೂಕು (ದ.ಕ.), ಇವರಿಗೆ ತಮ್ಮ ಭಾಗವಹಿಸುವಿಕೆಯ ಒಪ್ಪಿಗೆ ಪತ್ರವನ್ನು ಕಳುಹಿಸಿಕೊಡ ಬೇಕಾಗಿ ವಿನಂತಿಸಲಾಗಿದೆ.

ನಿಯಮಗಳು ಹೀಗಿವೆ:
ನಾಟಕ ಸ್ಪರ್ಧೆಯ ನಿಯಮಗಳು:

  • ನಾಟಕದ ಅವಧಿ ಗರಿಷ್ಠ- 55 ನಿಮಿಷಗಳು
  • ತಂಡದ ಸದಸ್ಯರ ಸಂಖ್ಯೆ ನೇಪಥ್ಯದವರು ಸೇರಿ 25ನ್ನು ಮೀರ ಬಾರದು.
  • ನಟರು ಕಾಲೇಜಿನ ಪ್ರಸ್ತುತ ವಿದ್ಯಾರ್ಥಿಗಳೇ ಆಗಿರಬೇಕು.
  • ವಿನ್ಯಾಸ,ನಿರ್ದೇಶನ,ಸಂಗೀತ -ಇತ್ಯಾದಿ ನೇಪಥ್ಯಕ್ಕೆ ಆ ಕಟ್ಟುಪಾಡು ಇಲ್ಲ
  • ಧ್ವನಿವರ್ಧಕ, ಕನಿಷ್ಠ ಬೆಳಕಿನ ವ್ಯವಸ್ಥೆ ಹಾಗೂ ಪರದೆಗಳನ್ನು ಒದಗಿಸಲಾಗುವುದು.
  • ಸ್ಪರ್ದೆಯು ರಜಾದಿನಗಳಲ್ಲಿ ಬೆಳಿಗ್ಗೆ ೯.೩೦ ರಿಂದ ಸಂಜೆ ಗಂ.೬ ವರೆಗೆ ನಡೆಯುವುದು
  • ವಿಶೇಷ ಬೆಳಕಿನ ವಿನ್ಯಾಸಗಳಿಗೆ ಅವಕಾಶವಿರುವುದಿಲ್ಲ.
  • ಪ್ರದರ್ಶನಕ್ಕೆ ಅಗತ್ಯವುಳ್ಳ ರಂಗ ಪರಿಕರ, ಸಂಗೀತ, ಪ್ರಸಾದನ ಇವುಗಳನ್ನು ತಂಡವೇ ಮಾಡಿಕೊಳ್ಳಬೇಕು.
  • ತಂಡದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಹಾಗೂ ತಂಡಕ್ಕೆ ಸ್ಮರಣಿಕೆ ನೀಡಲಾಗುವುದು.
  • ಪ್ರಥಮ ಬಹುಮಾನ -12000; ದ್ವಿತೀಯ ಬಹುಮಾನ -10000; ಹಾಗೂ ತೃತೀಯ ಬಹುಮಾನ 8000.
  • ನಾಟಕಗಳು ಸದಭಿರುಚಿಯ ಕನ್ನಡ ನಾಟಕಗಳಾಗಿರಬೇಕು.
  • ತಿಂಗಳ ಕೊನೆಯೊಳಗೆ ಒಪ್ಪಿಗೆ ಪತ್ರವನ್ನು – ಅಧ್ಯಕ್ಷರು, ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್, ಮಂಚಿ, ಅಂಚೆ, ಮಂಚಿ,-574323 ಈ ವಿಳಾಸಕ್ಕೆ ಕಳುಹಿಸಿ ಕೊಡಬೇಕು.

ಹೆಚ್ಚಿನ ಮಾಹಿತಿಗೆ ಅನಂತಕೃಷ್ಣ ಹೆಬ್ಬಾರ್ (9449642175), ಮೂರ್ತಿ ದೇರಾಜೆ (9448239519), ಕಜೆ ರಾಮಚಂದ್ರ ಭಟ್ (9448626107) ಸಂಪರ್ಕಿಸಲು ಕೋರಲಾಗಿದೆ.

ಯಕ್ಷಗಾನ ಸ್ಪರ್ಧೆಯ ನಿಯಮಗಳು:

  • ಪ್ರದರ್ಶನದ ಅವಧಿ ಗರಿಷ್ಠ 60 ನಿಮಿಷಗಳು ಮಾತ್ರ.
  • ತಂಡದ ಮುಮ್ಮೇಳ ಸದಸ್ಯರ ಸಂಖ್ಯೆ ಕನಿಷ್ಟ 5 ಮತ್ತು ಗರಿಷ್ಟ 7.
  • ವೇಷಧಾರಿಗಳು ಆಯಾ ಕಾಲೇಜಿನ ವಿದ್ಯಾರ್ಥಿಗಳೇ ಆಗಿರಬೇಕು. ಆ ಬಗ್ಗೆ ಗುರುತು ಚೀಟಿಯನ್ನು ಹೊಂದಿರ ಬೇಕು. ಹಿಮ್ಮೇಳಕ್ಕೆ ಆ ಕಟ್ಟುಪಾಡು ಇರುವುದಿಲ್ಲ.
    ಹಿಮ್ಮೇಳದಲ್ಲಿ ನಾಲ್ಕು ಜನ ಮಾತ್ರ ಭಾಗವಹಿಸಬಹುದು.
  • ಸ್ಪರ್ಧೆಗೆ ಮುಮ್ಮೇಳವನ್ನು ಮಾತ್ರ ಪರಿಗಣಿಸಲಾಗುವುದು.
  • ಮುಮ್ಮೇಳದಲ್ಲಿ- ಕಿರೀಟ ವೇಷ, ಪಕಡಿ ವೇಷ,ಬಣ್ಣದ ವೇಷ, ಸ್ತ್ರೀ ವೇಷ, ಹಾಸ್ಯ ವೇಷ ಕಡ್ಡಾಯ ಇರಬೇಕು. ಇವುಗಳಿಗೆ ಪ್ರತ್ಯೇಕ ವೈಯುಕ್ತಿಕ ನಗದು ಬಹುಮಾನಗಳಿವೆ.
  • ವೇಷ ಭೂಷಣ ಮತ್ತು ಹಿಮ್ಮೇಳ ಪರಿಕರಗಳನ್ನು ಒದಗಿಸಲಾಗುವುದು.
  • ತಂಡದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಹಾಗೂ ತಂಡಕ್ಕೆ ಸ್ಮರಣಿಕೆ ನೀಡಲಾಗುವುದು.
  • ಪ್ರಥಮ, ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದ ತಂಡಗಳಿಗೆ ಅನುಕ್ರಮವಾಗಿ ಹತ್ತು ಮತ್ತು ಏಳುವರೆ ಸಾವಿರ, ರೂಪಾಯಿಗಳ ನಗದು ಬಹುಮಾನವನ್ನು ನೀಡಲಾಗುವುದು.
  • ಸ್ಪರ್ಧೆಯು ರಜಾದಿನದಲ್ಲಿ ಬೆಳಿಗ್ಗೆ 9 ರಿಂದ ನಡೆಯುವುದು
  • ನವಂಬರ ತಿಂಗಳ ದಿನಾಂಕ: 25 ರ ಒಳಗಾಗಿ ಒಪ್ಪಿಗೆ ಪತ್ರವನ್ನು -ಅಧ್ಯಕ್ಷರು, ಬಿ.ವಿ.ಕಾರಂತ ರಂಗಭೂಮಿಕಾ ಟ್ರಸ್ಟ್(ರಿ), ಮಂಚಿ, ಅಂಚೆ, ಮಂಚಿ,- 574323 ಈ ವಿಳಾಸಕ್ಕೆ ಕಳುಹಿಸಿ ಕೊಡಬೇಕಾಗಿ ವಿನಂತಿ.
    ಹೆಚ್ಚಿನ ಮಾಹಿತಿಗೆ ಕಜೆ ರಾಮಚಂದ್ರ ಭಟ್ (9448626107), ಕೆ.ಗಣೇಶ ಐತಾಳ(9902296682), ಪುಷ್ಪರಾಜ, ಕುಕ್ಕಾಜೆ(9731447243) ಸಂಪರ್ಕಿಸಲು ಕೋರಲಾಗಿದೆ.
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts