ವಿಟ್ಲ

ವಿಟ್ಲ ಟ್ರಾಫಿಕ್ ಜಾಮ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮ

www.bantwalnews.com

ವಿಟ್ಲ ಪೇಟೆಯ ಆಡಳಿತ, ಪೊಲೀಸ್ ಮತ್ತು ಜನಸಾಮಾನ್ಯರಿಗೆ ತಲೆನೋವಾಗಿರುವ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಕೆಲವೊಂದು ನಿರ್ಧಾರಗಳನ್ನು ಪ್ರಕಟಿಸಲಾಗಿದೆ.

ಜಾಹೀರಾತು

 ಅಧ್ಯಕ್ಷ ಅರುಣ್ ವಿಟ್ಲ ಅಧ್ಯಕ್ಷತೆಯಲ್ಲಿ ವಿಟ್ಲ ಪ.ಪಂ. ಸಭಾಭವನದಲ್ಲಿ ಪ.ಪಂ.ಆಡಳಿತ ಮತ್ತು ಪೊಲೀಸ್ ಠಾಣಾಧಿಕಾರಿಗಳ ಸಮ್ಮುಖ ರಿಕ್ಷಾ, ಕಾರು, ಬಸ್ ಸಂಬಂಧಪಟ್ಟ ವಿವಿಧ ಸಂಘಟನೆಗಳ ಸಭೆ ನಡೆಯಿತು.ವಿಟ್ಲ ಠಾಣಾಧಿಕಾರಿ ನಾಗರಾಜ್, ಪ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ವಿ.ರಾಮದಾಸ ಶೆಣೈ, ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು. ಸಂಘಟನೆ ಪ್ರಮುಖರು ಮತ್ತು ವ್ಯಾಪಾರಿಗಳು ಭಾಗವಹಿಸಿ ಅಭಿಪ್ರಾಯಗಳನ್ನು ತಿಳಿಸಿದರು.

Jpeg

ಸಭೆಯ ಮುಖ್ಯಾಂಶಗಳು ಇವು.

  • ವಿಟ್ಲ-ಪುತ್ತೂರು ರಸ್ತೆಯ ಬಲಬದಿಯಲ್ಲಿ ಯಾವುದೇ ವಾಹನಗಳನ್ನು ನಿಲ್ಲಿಸಬಾರದು.
  • ವಿಟ್ಲ ಸಾಲೆತ್ತೂರು ರಸ್ತೆಯ ಬೆನಕ ಕ್ಲಿನಿಕ್ ಆಸ್ಪತ್ರೆ ತನಕ ಯಾವುದೇ ವಾಹನ ನಿಲ್ಲಿಸಬಾರದು.
  • ವಿಟ್ಲ ಮಂಗಳೂರು ರಸ್ತೆಯ ಪಂಚಲಿಂಗೇಶ್ವರ ದೇವಸ್ಥಾನದ ಹಿಂಬದಿಯ ವರೆಗೆ ಹಾಗೂ ಕಾಸರಗೋಡು ರಸ್ತೆಯ ವಿಜಯಲಕ್ಷ್ಮೀ ಟ್ರೇಡರ್‍ಸ್ ಅಂಗಡಿ ವರೆಗೆ ವಾಹನ ನಿಲುಗಡೆಗೆ ಅವಕಾಶವಿಲ್ಲ.
  • ವಿಟ್ಲ ಪುತ್ತೂರು ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿಯ ಎಡಬದಿಗೆ ಪಾರ್ಕಿಂಗ್ ಮಾಡಬೇಕು.
  • ವಿಟ್ಲ ಸಾಲೆತ್ತೂರು ರಸ್ತೆಯ ಸಮಾಜ ಸೇವಾ ಬ್ಯಾಂಕ್ ಬಳಿ ಬಸ್ ಮತ್ತು ರಿಕ್ಷಾಗಳಿಗೆ ನಿಲ್ಲಲು ಮಾತ್ರ ಅವಕಾಶ.
  • ವಿಟ್ಲ ಮಂಗಳೂರು ರಸ್ತೆಯ ಲಯನ್ಸ್ ಬಸ್ ನಿಲ್ದಾಣದ ಬಳಿ ಬಸ್‌ಗಳು ನಿಲ್ಲಿಸಬೇಕು.
  • ಅಂತರ್‌ರಾಜ್ಯ ಹಾಗೂ ಖಾಸಗಿ ಬಸ್, ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಪುತ್ತೂರು ರಸ್ತೆಯ ಸ್ಟೈಲ್ ಪಾರ್ಕ್ ಬಳಿ ನಿಲ್ಲಲು ಅವಕಾಶ
  • ಹಳೆ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗೆ ನಿಲ್ಲಲು 15 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಹಳೆ ಬಸ್ ನಿಲ್ದಾಣದೊಳಗೆ ೫ ಕಾರುಗಳಿಗೆ ಮಾತ್ರ ನಿಲ್ಲಿಸಲು ಅವಕಾಶ .
  • ಹಳೆ ಬಸ್ ನಿಲ್ದಾಣದಲ್ಲಿ ರಿಕ್ಷಾಗಳಿಗೆ 2 ಸಾಲಿನಲ್ಲಿ ನಿಲ್ಲಲು ಅವಕಾಶ .
  • ಏಕಮುಖ ರಸ್ತೆಯಾದ ಪಂಚಲಿಂಗೇಶ್ವರ ದೇವಸ್ಥಾನ ರಸ್ತೆಯಲ್ಲಿ 2 ರಿಕ್ಷಾಗಳಿಗೆ ನಿಲ್ಲಲು ತಾತ್ಕಾಲಿಕ ಅವಕಾಶ.
  • ಪೇಟೆಯ ಒಳಗಡೆ ಕರ್ಕಶ ಹಾರ್ನ್‌ಗಳನ್ನು ಬಳಸಬಾರದು
  • . ಪುರಭವನದ ರಸ್ತೆಯಲ್ಲಿ ಸಂತೆಯ ದಿನ ಹೊರತುಪಡಿಸಿ ಉಳಿದ ದಿನ ಬಲಭಾಗದಲ್ಲಿ ಪಾರ್ಕಿಂಗ್ ಮಾಡುವುದು.
  • ಈ ಎಲ್ಲಾ ಕಾನೂನುಗಳು ನ.4ರಿಂದ 10 ದಿನಗಳೊಳಗೆ ಜಾರಿಗೆ ಬರಲಿದೆ.
  • ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.