ಮಂಗಳೂರು-ಬಿ.ಸಿ.ರೋಡ್ ಮಾರ್ಗದಲ್ಲಿ ಸಿಗುವ ಫರಂಗಿಪ್ಭೆಟೆಯಲ್ಲಿರುವ ಶೌಚಾಲಯ ಸದ್ಯ ಪೊದೆಗಳ ಮಧ್ಯೆ ಇದೆ. ಮೂಗಿಗೆ ದುರ್ನಾತ ಬಡಿಯುವ ಸ್ಥಿತಿ.
ಟೈಲ್ಸ್ ನೆಲದಲ್ಲಿ ಒಂದು ಬದಿಯಲ್ಲಿ ಬೀಡಿ, ಸಿಗರೇಟಿನ ತುಂಡುಗಳು, ಕುಡಿದು ಬಿಸಾಡಿದ ಮದ್ಯದ ಬಾಟಲಿಗಳು ಮತ್ತು ಪ್ಯಾಕೆಟ್‌ಗಳು, ಗುಟುಕಾದ ಪ್ಯಾಕೇಟ್‌ಗಳು, ಹಾಳು ಬಾಟಲಿಗಳು ಮತ್ತು ಇನ್ನಿತರ ಕೊಳಕು ವಸ್ತುಗಳು. ಪಾಚಿ ಹಿಡಿದ ಗೋಡೆ, ಗೋಡೆಯಲ್ಲಿ ಕಿತ್ತು ಹೋಗಿರುವ ವಿದ್ಯುತ್ ಸ್ವಿಚ್‌ಬೋರ್ಡ್ ಮತ್ತು ನೇತಾಡುತ್ತಿರುವ ವಿದ್ಯುತ್ ಮೀಟರ್ ಬೋರ್ಡ್ ಫ್ಯೂಸ್ ವಯರ್.
ಇದು ಶೌಚಾಲಯ.
ಸಂಪೂರ್ಣ ಸ್ವಚ್ಛತಾ ಆಂದೋಲನದ ಭಾಗವಾಗಿ 2008ರಲ್ಲಿ ಪುದು ಗ್ರಾ.ಪಂ.ನಲ್ಲಿ ಒಂದು ಲಕ್ಷ ರೂ. ವೆಚ್ಚದಲ್ಲಿ ಹೆದ್ದಾರಿ ಬದಿ ಶೌಚಾಲಯ ನಿರ್ಮಾಣವಾಗಿತ್ತು. ಆ ಬಳಿಕ 2011ರಲ್ಲಿ ಮತ್ತೆ ೬೦ ಸಾವಿರ ರೂ.ವೆಚ್ಚದಲ್ಲಿ ಟೈಲ್ಸ್ ಹಾಕಿ ಈ ಶೌಚಾಲಯಕ್ಕೆಹೊಸತನವನ್ನು ತರಲಾಯಿತು.
ಆದರೆ ಈಗಿನ ಸ್ಥಿತಿ ಇದು. ಚಿತ್ರಗಳೇ ಕತೆ ಹೇಳುತ್ತವೆ.
ಮುಂದಿನ ದಿನಗಳಲ್ಲಿ ಅದರ ನಿರ್ವಹಣೆಯ ಬಗ್ಗೆ ಮುತುವರ್ಜಿ ವಹಿಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಪಂಚಾಯತ್‌ನಿಂದ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ಪುದು ಪಿಡಿಒ.