www.bantwalnews.com
ಸಾಹಿತ್ಯ ಅಧ್ಯಯನಕ್ಕೊಂದು ಹೊಸ ರೂಪು ಕೊಟ್ಟ ಈ ಹೊತ್ತಿಗೆ ಈಗ ಕನ್ನಡ ಕಥಾ ಸ್ಪರ್ಧೆಗಳನ್ನು ಆಯೋಜಿಸಿದೆ.
ಇದರಲ್ಲಿ ಎರಡು ವಿಭಾಗಗಳಿವೆ. ಒಂದು ಎಲ್ಲರಿಗೂ, ಇನ್ನೊಂದು ಕಾಲೇಜು ವಿದ್ಯಾರ್ಥಿಗಳಿಗೆ.
ಎರಡೂ ವಿಭಾಗಗಳಲ್ಲಿ ಮೊದಲನೇ ಬಹುಮಾನ 5000 ರೂ. ಎರಡನೇ ಬಹುಮಾನ 3000 ರೂ. ಮತ್ತು ಮೂರನೇ ಬಹುಮಾನ 2000 ರೂ ಎಂದು ನಿಗದಿಯಾಗಿದೆ.
ನಿಯಮಗಳು ಹೀಗಿವೆ:
- ಕಥೆಗಳು ಸ್ವತಂತ್ರವಾಗಿದ್ದು, ಬ್ಲಾಗ್, ವೆಬ್ ಸೈಟ್, ಫೇಸ್ ಬುಕ್ಕು ಸಹಿತ ಯಾವುದೇ ತಾಣಗಳಲ್ಲೂ ಪ್ರಕಟಗೊಂಡಿರಬಾರದು.
- ಪದಮಿತಿ ಗರಿಷ್ಠ 1600 ಪದಗಳು ಮಾತ್ರ.
- ಇ ಮೈಲ್ ಮೂಲಕ ಕಥೆಗಳನ್ನು ಕಳುಹಿಸುವವರು ಬರಹ, ನುಡಿ, ಯುನಿಕೋಡ್ ಇವುಗಳಲ್ಲಿ ಯಾವುದಾದರೂ ಒಂದು ತಂತ್ರಾಂಶಗಳನ್ನು ಬಳಸಬೇಕು.
- ಹಸ್ತಪ್ರತಿ ಕಳುಹಿಸುವವರು ಪುಟದ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ, ಚಿತ್ತುಗಳು ಇಲ್ಲದಂತೆ ಬರೆದು ಕಳುಹಿಸಬೇಕು.
- ಕಥೆಗಾರರು ಪ್ರತ್ಯೇಕ ಹಾಳೆಗಳಲ್ಲಿ ತಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆಯನ್ನು ಬರೆದಿರಬೇಕು. ಕಥೆಯ ಪುಟದಲ್ಲಿ ಹೆಸರು ಇರಬಾರದು.
- ಒಬ್ಬರೇ ಎರಡು ವಿಭಾಗಗಳಲ್ಲಿ ಸ್ಪರ್ಧಿಸುವಂತಿಲ್ಲ.
- ವಿದ್ಯಾರ್ಥಿಗಳ ವಿಭಾಗಕ್ಕೆ ಕಳುಹಿಸುವವರು ತಮ್ಮ ಕಾಲೇಜಿನ ವ್ಯಾಸಂಗ ದೃಢೀಕರಣ ಪತ್ರವನ್ನು ಕಥೆಯೊಂದಿಗೆ ಕಳುಹಿಸುವುದು ಕಡ್ಡಾಯ.
- 2018ರ ಜನವರಿ ತಿಂಗಳ ಕೊನೇ ವಾರದಲ್ಲಿ ವಿಜೇತರ ಹೆಸರು ಘೋಷಿಸಲಾಗುವುದು.
ನಿಮ್ಮ ಕಥೆ ತಲುಪಲು ಕೊನೇ ದಿನಾಂಕ ಡಿಸೆಂಬರ್ 15, 2017 ಸಾಫ್ಟ್ ಕಾಪಿ ಕಳುಹಿಸುವವರು ಇ ಮೈಲ್ ವಿಳಾಸಕ್ಕೆ ಕಳುಹಿಸಬಹುದು. ehottige.ks@gmail.com
ಹಸ್ತಪ್ರತಿ ಕಳುಹಿಸುವವರು – ಈ ಹೊತ್ತಿಗೆ, #65, ಮುಗುಳ್ನಗೆ, 3ನೇ ಎ ಅಡ್ಡರಸ್ತೆ, ಪಿಎನ್ ಬಿ ನಗರ, ದೊಡ್ಡಕಲ್ಲಸಂದ್ರ, ಕೋಣನಕುಂಟೆ, ಬೆಂಗಳೂರು 560062 ವಿಳಾಸಕ್ಕೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
Harish Mambady2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ಅಕೌಂಟ್ ನಂಬ್ರ ಹೀಗಿದೆ. For Online Transaction: Account Name: Harish M G, Bank: Karnataka bank Account No: 0712500100982501 IFSC Code: KARB0000071 ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ