ವಿಟ್ಲ

ಸಹಜವಾದ ವಚನಗಳು ಧರ್ಮಜ್ಞಾನದ ಮೂಲ

www.bantwalnews.com

ಕೃತಕವಲ್ಲದ ಸಹಜವಾದ ವಚನಗಳು ಧರ್ಮಜ್ಞಾನದ ಮೂಲವಾಗಿದೆ. ವೇದ ಹಾಗೂ ದೇವದಲ್ಲಿ ವ್ಯತ್ಯಾಸವೇನಿಲ್ಲ. ವೇದ ತ್ರಿಗುಣಾತೀತನ ಅನುಸಂಧಾನ ಮಾಡುತ್ತದೆ. ವೇದಗಳಿಗೂ ದೇವನಿಗೂ ಆದಿ, ಅಂತ್ಯಗಳಿಲ್ಲ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು ವ್ಯಾಖ್ಯಾನಿಸಿದರು.

ಜಾಹೀರಾತು

ಹಾರಕರೆ ನಾರಾಯಣ ಭಟ್ ಅವರ ಮನೆಯಲ್ಲಿ ಕಲಾರಾಮ ವಿಭಾಗದ ಆಶ್ರಯದಲ್ಲಿ ಏಕಾದಶಿಯಂದು ಶಿಷ್ಯರೊಡಗೂಡಿ ಆಯೋಜಿಸುವ ಸತ್ಸಂಗಮಾಲಿಕೆ ರಾಮಪದ ಕಾರ್ಯಕ್ರಮದಲ್ಲಿ ವೇದಗಳ ಸಾರದ ಬಗ್ಗೆ ಪ್ರವಚನ ನೀಡಿದರು.

ದೈವ ಕೃಪೆಯಿಂದ ಮೂರು ಜನ್ಮಗಳನ್ನು ಪಡೆದ ಭರಧ್ವಾಜರು ವೇದಗಳ ಅಧ್ಯಯನವನ್ನೇ ಮಾಡಿದ್ದರು. ಮೂರನೇ ಜನ್ಮದ ಕೊನೆಯ ಹಂತದಲ್ಲಿ ಇಂದ್ರ ದೇವರು ಪ್ರತ್ಯಕ್ಷವಾಗಿ ಇನ್ನೊಂದು ಜನ್ಮ ನೀಡುವ ವರ ನೀಡಿದಾಗಲೂ ಭರಧ್ವಾಜರು ಬ್ರಹ್ಮಚರ್ಯ ಮತ್ತು ವೇದಾಧ್ಯಯನವನ್ನು ಮುಂದುವರಿಸುವೆ ಎಂದು ಹೇಳುತ್ತಾರೆ. ಇಂತಹ ಗೀಳು ಇರಬೇಕು ಎಂದರು.

ವೇದಮೂರ್ತಿ ಶ್ರುತಿಸಾಗರ ಪಳ್ಳತ್ತಡ್ಕ ಶಂಕರನಾರಾಯಣ ಭಟ್ಟ ಘನಪಾಠಿಗಳು, ವೇದಮೂರ್ತಿ ಪಕಳಕುಂಜ ಚಾವಡಿಬಾಗಿಲು ಶಂಭು ಭಟ್ಟರು, ವೇದಮೂರ್ತಿ ಪಳ್ಳತ್ತಡ್ಕ ಶಶಿಧರಭಟ್ಟರು, ವೇದಮೂರ್ತಿ ಮುರ ಮುಕುಂದ ಶರ್ಮಾ, ವೇದಮೂರ್ತಿ ನರಸಿಂಹ ಭಟ್ ಮಿತ್ತೂರು ವೇದಗಳನ್ನು ಪಠಿಸಿದರು. ಸಹಗಾಯನದಲ್ಲಿ ದೀಪಿಕಾ ಭಟ್, ಪೂಜಾ ಭಟ್ ಸಹಕರಿಸಿದರು. ಹಾರ್ಮೋನಿಯಂನಲ್ಲಿ ಪ್ರಜ್ಞಾನಲೀಲಾಶುಕ ಉಪಾಧ್ಯಾಯ, ಸಿತಾರ್‌ನಲ್ಲಿ ಸುಬ್ರಹ್ಮಣ್ಯ ಹೆಗಡೆ ಇದ್ದರು. ಅನುರಾಧಾ ಪಾರ್ವತಿ ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.