ಬಂಟ್ವಾಳ

ಬಿರುಸುಗೊಂಡ ಮನೆ ಮನೆ ಕಾಂಗ್ರೆಸ್ ಅಭಿಯಾನ

www.bantwalnews.com

ಕಳೆದ ಕೆಲ ದಿನಗಳಿಂದ ಮನೆ ಮನೆ ಕಾಂಗ್ರೆಸ್ ಅಭಿಯಾನ ಬಿರುಸುಗೊಂಡಿದೆ. ಕಳ್ಳಿಗೆಯಲ್ಲಿ ಸಚಿವ ಬಿ.ರಮಾನಾಥ ರೈ ಅವರೇ ಮನೆ ಮನೆಗೆ ಅಭಿಯಾನಕ್ಕೆ ಹೊರಟರೆ, ಕಾಂಗ್ರೆಸ್ ನ ಜನಪ್ರತಿನಿಧಿಗಳು, ಕಾರ್ಯಕರ್ತರು ಪ್ರತಿದಿನವೂ ಮನೆಗಳಿಗೆ ತೆರಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭೇಟಿಯ ಫೊಟೋಗಳು, ಸಾಧನಾ ವಿವರಗಳ ಪೋಸ್ಟರುಗಳು ಕಾಣಿಸಲಾರಂಭಿಸಿವೆ. ಕೆಲ ಮನೆ ಮನೆ ಭೇಟಿಯ ಮಾಹಿತಿ ಇಲ್ಲಿದೆ.

ಪುದು ವಲಯ:

ಮಂಗಳೂರು ವಿಧಾನಸಭಾ ಕ್ಷೇತ್ರಕೊಳ್ಳಪಟ್ಟ ಬಂಟ್ವಾಳ ತಾಲೂಕಿನ ಪುದು ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮವನ್ನು ಜಿ.ಪಂ. ಮಾಜಿ ಸದಸ್ಯ, ಡಿಸಿಸಿ ಕಾರ್ಯದರ್ಶಿ ಉಮ್ಮರ್ ಫಾರೂಕ್ ಅವರ ನೇತೃತ್ವದಲ್ಲಿ  ಶುಕ್ರವಾರ ಸಂಜೆ ಫರಂಗಿಪೇಟೆಯಲ್ಲಿ ನಡೆಸಲಾಯಿತು.

ಮನೆಮನೆಗಳಿಗೆ ತೆರಳಿ ರಾಜ್ಯ ಸರಕಾರದ ಸಾಧನೆಗಳ ಬಗ್ಗೆ ತಿಳಿಸಿ ಸ್ಟಿಕ್ಕರ್ ಹಚ್ಚಲಾಯಿತು. ಈ ಸಂದರ್ಭ ಕರಾವಳಿ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಚೇರ್‌ಮನ್ ಯು.ಬಿ.ಸಲೀಂ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಸರಕಾರದ ಸಾಧನೆ ಕಾಂಗ್ರೆಸ್ ಕಾರ್ಯಕರ್ತರನ್ನು  ತಲೆ ಎತ್ತಿ ನಡೆಯುವಂತೆ  ಮಾಡಿದೆ ಎಂದರು.

ಜಿ.ಪಂ.ಮಾಜಿ ಸದಸ್ಯ ಉಮ್ಮರ್ ಫಾರೂಕ್ , ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಮಂಗಳೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಸೀರ್ ಪೇರಿಮಾರ್, ಪುದು ವಲಯ ಸಮಿತಿ ಅಧ್ಯಕ್ಷ ರಮ್ಲಾನ್ ಮಾರಿಪಳ್ಲ, ಇಕ್ಬಾಲ್ ಸುಜೀರ್, ಯುವ ಕಾಂಗ್ರೆಸ್ ಕಾರ್ಯದರ್ಶಿ ಶೌಕತ್ ಆಲಿ ಪಾಡಿ, ಮುಹಮ್ಮದ್ ಹಿಶಾಂ,ರಫೀಕ್ ಪೇರಿಮಾರ್, ಆಸೀಫ್ ಮೇಲ್ಮನೆ, ಯಾಕೂಬ್ ಮಲ್ಲಿ, ಇಮ್ತಿಯಾಝ್ ತುಂಬೆ, ಸಲಾಂ ಮಲ್ಲಿ, ಮುಸ್ತಾಫ ಅಮ್ಮೆಮಾರ್, ಮಹಮ್ಮದ್ ಫರಂಗಿಪೇಟೆ, ಸಲೀಂ ವಳಚ್ಚಿಲ್, ಖಾಲೀದ್ ಫರಂಗಿಪೇಟೆ, ಲತೀಫ್ ಮಲಾರ್, ಇಮ್ರಾನ್ ದೇವಸ್ಯ, ಬಾಫೀ, ಫರಂಗಿಪೇಟೆ, ಅಸೂರ್ ಅಮ್ಮೆಮಾರ್   ಮತ್ತಿತರರು ಹಾಜರಿದ್ದರು.

ಪಾಂಡವರಗುಡ್ಡೆಯಲ್ಲಿ:

ರಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಡವರ ಗುಡ್ಡೆ ಎಂಬಲ್ಲಿ ಮನೆಮನೆಗೆ  ಕಾಂಗ್ರೆಸ್ ಕಾರ್ಯಕ್ರಮಕ್ಕೆ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಚಾಲನೆ ನೀಡಿದರು. ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿದಾಗ ಸರಕಾರದ ಸಾಧನೆ ಜನ ಪರ ಕಾರ್ಯಕ್ರಮಗಳು ಜನರಿಗೆ ಮನ ದಟ್ಟಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ ಸದಾನಂದ, ಗೇರು ನಿಗiದ ನಿರ್ದೇಶಕ ಜಗದೀಶ್ ಕೊಯಿಲ, ವಲಯ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ವಲಯ ಕಾಂಗ್ರೆಸ್ ಕಾರ್ಯದರ್ಶಿ ಭೋಜರಾಜ ಕೊಡಂಗೆ, ಯುವ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕೊಯಿಲ, ಉದಯ ಕುಮಾರ್ ಕೊಯಿಲ, ಸಂತೋಸ್ ಪರಾರಿ ಬೆಟ್ಟು, ನೋಣಯ ಸಪಲ್ಯ, ಶ್ರೀನಿವಾಸ ಕೊಯಿಲ, ಸಚ್ಚಿದಾನಂದ ಕೊಯಿಲ, ರೋಹಿತ್, ತನಿಯ, ಬಶೀರ್ ಉಪಸ್ಥಿತರಿದ್ದರು.

 

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts