ರಾಜ್ಯ ಸರಕಾರ ಕೆಪಿಎಂಪಿ ಕಾಯ್ದೆಗೆ ತಿದ್ದುಪಡಿ ಮಾಡಲು ನಿರ್ಧರಿಸಿರುವುದನ್ನು ವಿರೋಧಿಸಿ ನ.3 (ಶುಕ್ರವಾರ) ರಂದು ರಾಜ್ಯಾದಾದ್ಯಂತ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆಗೆ ನಿರ್ಧರಿಸಿದ್ದು,ಬಂಟ್ವಾಳ ತಾಲೂಕಿನಲ್ಲೂ ವೈದ್ಯಕೀಯ ಸೇವೆ ಸ್ಥಗಿತಗೊಳ್ಳಲಿದೆ .
ಭಾರತೀಯ ವೈದ್ಯಕೀಯ ಸಂಘದ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ. ಡಾ. ಅಶ್ವಿನ್ ಬಾಳಿಗ ಗುರುವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೆಳಿಗ್ಗೆ 6 ಗಂಟೆಯಿಂದ ಶನಿವಾರ ಬೆಳಿಗ್ಗೆ 6 ಗಂಟೆಯವರೆಗೆ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಸ್ಥಗಿತಗೊಳ್ಳಲಿದೆ ಎಂದರು. ಕಾಯ್ದೆ ಜಾರಿಯಾದಲ್ಲಿ ವೈದ್ಯ ವೃತ್ತಿ ನಿರ್ವಹಿಸಲು ಅಸಾಧ್ಯವಾದ ಸ್ಥಿತಿ ಇದ್ದು, ಸರಕಾರ ತಕ್ಷಣ ಈ ಮಸೂದೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವೈದ್ಯರಾದ ಡಾ.ಎಂ.ಎಸ್.ಮಹೇಶ್, ಡಾ.ಶಿವಪ್ರಸಾದ್ ರೈ, ಡಾ.ಸುಧೀರ್ ರೈ, ಡಾ.ಎಂ.ಎಂ.ಶರೀಫ್, ಡಾ.ಕೆ.ಜಿ.ಶೆಣೈ, ಡಾ.ಪ್ರದೀಪ್ ಕುಮಾರ್ ಶೆಟ್ಟಿ, ಡಾ.ರಮೇಶಾನಂದ ಸೋಮಯಾಜಿ, ಡಾ.ಬಾಲಕೃಷ್ಣ ಅಗ್ರಬೈಲ್ ಮೊದಲಾದವರಿದ್ದರು.