ಜಿಲ್ಲೆಯಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದೆ. ಪಕ್ಷ ನಾಯಕತ್ವದಿಂದ ಬೇಸತ್ತು ಬಿಜೆಪಿಗೆ ಅಲ್ಲಿಂದ ಬರಲಿದ್ದಾರೆ. ಶಾಸಕರೂ ಬರಬಹುದು. ಕಾದು ನೋಡಿ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಬಿ.ಸಿ.ರೋಡಿನ ಪಕ್ಷ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೆ ಯಾವಾಗ ಎಲ್ಲಿ ಟಿಕೆಟ್ ನೀಡಬೇಕು ಎಂಬ ನಿರ್ಧಾರ ಮಾಡುವುದು ಬಿಜೆಪಿ ರಾಷ್ಟ್ರಾಧ್ಯಕ್ಷರು. ನನ್ನ ಅಭ್ಯರ್ಥಿತನವನ್ನೂ ಅಂತಿಮಗೊಳಿಸುವವರು ಬಿಜೆಪಿ ವರಿಷ್ಠರು. ಹೀಗಾಗಿ ಯಾವ ಕ್ಷೇತ್ರದಲ್ಲಿ ಯಾರೂ ಆಕಾಂಕ್ಷಿಗಳಿದ್ದರೂ ಅಂತಿಮವಾಗಿ ನಿರ್ಧಾರ ನಮ್ಮದಲ್ಲ ಎಂದು ನಳಿನ್ ಹೇಳಿದರು.
ದ.ಕ.ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸರಕಾರವು ಸಿಆರ್ಎಫ್ ಯೋಜನೆಯಡಿ 122.90 ಕೋಟಿ ರೂ.ವನ್ನು ಮಂಜೂರು ಗೊಳಿಸಿದ್ದು, ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೂ ಸುಮಾರು 60-70 ಕೋಟಿ ರೂ. ಅನುದಾನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಜೂರುಗೊಂಡಿದೆ. ಆದರೆ ಇದೆಕ್ಕೆಲ್ಲ ಶಿಷ್ಟಾಚಾರವನ್ನು ಉಲ್ಲಂಘಿಸಿ ಸಚಿವ ರಮಾನಾಥ ರೈ ಅವರು ತೆಂಗಿನಕಾಯಿ ಒಡೆಯುತ್ತಿದ್ದಾರೆ ಎಂದು ಟೀಕಿಸಿದರು.
ರಾಜಕೀಯ ಒತ್ತಡದಿಂದ ಅಧಿಕಾರಿಗಳು ಈ ಸಂದರ್ಭದಲ್ಲಿ ಶಿಷ್ಟಾಚಾರವನ್ನು ಉಲ್ಲಂಘಿಸುತ್ತಿದ್ದು, ಅಂತಹ ಅಧಿಕಾರಿಗಳು ಮುಂದಿನ ದಿನಗಳಲ್ಲಿ ನ್ಯಾಯಾಲಯಕ್ಕೆ ಅಲೆಯಬೇಕಾದೀತು ಎಂದು ನಳಿನ್ ಎಚ್ಚರಿಸಿದರು.
ರಸ್ತೆ ಕಾಮಗಾರಿ ತ್ವರಿತ: ಮೀಟಿಂಗ್
ಬಿ.ಸಿ.ರೋಡಿನ ಸರ್ವೀಸ್ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಅದನ್ನು ವೇಗಗೊಳಿಸಲು ಹಾಗೂ ಸಮರ್ಪಕ ಕಾಮಗಾರಿ ನಡೆಸಲು ಒಂದೆರಡು ದಿನಗಳಲ್ಲಿ ಸಭೆಯೊಂದನ್ನು ಕರೆಯುವುದಾಗಿ ನಳಿನ್ ಹೇಳಿದರು.
ಈ ಸಂಧರ್ಭ ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ, ಬಜೆಪಿ ಮುಖಂಡರಾದ ರಾಜೇಶ್ ನಾಯಕ್ ಉಳಿಪಾಡಿಗುತ್ತು, ಸತೀಶ್ ಕುಂಪಲ, ಪದ್ಮನಾಭ ಕೊಟ್ಟಾರಿ, ಜಿ.ಆನಂದ, ಸುಲೋಚನಾ ಜಿ.ಕೆ.ಭಟ್, ದಿನೇಶ್ ಭಂಡಾರಿ, ಸತ್ಯಜಿತ್ ಸುರತ್ಕಲ್ ಮತ್ತಿತರರು ಇದ್ದರು.
ಕೆ.ಎನ್.ಆರ್. ಕನ್ಸಸ್ಟ್ರಕ್ಷನ್ಸ್ ಗುತ್ತಿಗೆ ವಹಿಸಿಕೊಂಡಿರುವ ಬಿ.ಸಿ.ರೋಡ್ ಭಾಗದ ಕಾಮಗಾರಿಯಲ್ಲಿ ಸೇತುವೆ ಪೂರ್ಣಗೊಳಿಸಿ ಓಡಾಟ ಆರಂಭಗೊಂಡಿರುವುದು ಮಹತ್ವದ ಹೆಜ್ಜೆಯಾಗಿದ್ದು, ಬಿ.ಸಿ.ರೋಡ್ ಸರ್ಕಲ್…