www.bantwalnews.com
ಕನ್ನಡ ಕೇವಲ ವ್ಯವಹಾರಿಕ ಭಾಷೆಯಾಗದೇ, ಕನ್ನಡಿಗರ ಮನ- ಮನೆ ಭಾಷೆಯಾಗಬೇಕು ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ಅವರು ಹೇಳಿದರು.
ಬಂಟ್ವಾಳ ತಾಲೂಕು ಕನ್ನಡ ರಾಜ್ಯೋತ್ಸವದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ನಾಡು-ನುಡಿಗೆ ಶ್ರಮಿಸಿದ ಅನೇಕ ಹಿರಿಯರನ್ನು ಸ್ಮರಿಸುವ ಕಾರ್ಯ ಆಗಬೇಕು ಎಂದರು.
ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಮೆಸ್ಕಾಂ ಪ್ರತಿನಿಧಿ ವೆಂಕಪ್ಪ ಪೂಜಾರಿ, ಬಿಇಒ ಶಿವಪ್ರಕಾಶ್, ತಾ.ಪಂ. ಇಒ ಸಿಪ್ರಿಯಂ ಮಿರಾಂದ, ಶಿಶು ಯೋಜನಾಧಿಕಾರಿ ಸುಧಾ ಜೋಷಿ, ಉಪ ತಹಶೀಲ್ದಾರ್ ಗಳಾದ ವಾಸು ಶೆಟ್ಟಿ, ಗೋಪಾಲ್, ಸೀತಾರಾಂ, ಗ್ರೆಟ್ಟಾ ಮಸ್ಕರೇಂಜಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ನಾರಾಯಣ ಗೌಡ ಪ್ರಧಾನ ಭಾಷಣ ಗೈದರು. ಮಂಜು ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಕಂದಾಯ ನಿರೀಕ್ಷಕರಾದ ರಾಮ ಕಾಟಿಪಳ್ಳ, ದಿವಾಕರ ಮುಗುಳಿಯ, ನವೀನ್ ಬೆಂಜನಪದವು, ತಾಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ, ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ವಿಷಯ ನಿರ್ವಾಹಕ ವಿಷು ಕುಮಾರ್ ಹಾಜರಿದ್ದರು ಕಾರ್ಯಕ್ರಮದ ಬಳಿಕ ಪುರಸಭಾ ವ್ಯಾಪ್ತಿಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತಾ.ಪಂ. ಇಓ ಸಿಪ್ರಿಯಂ ಮಿರಾಂದ, ಕಲಾವಿದ ಮಂಜು ವಿಟ್ಲ ಅವರನ್ನು ಸನ್ಮಾನಿಸಲಾಯಿತು.