ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನವಿರೋಧಿ ನೀತಿ ಖಂಡಿಸಿ ಬಂಟ್ವಾಳ ತಾಲೂಕು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಸ್ವಾತಂತ್ರ ಜ್ಯೋತಿಯ ದ್ಯೋತಕವಾಗಿ ಪಂಜಿನ ಮೆರವಣಿಗೆ ಸೋಮವಾರ ರಾತ್ರಿ ನಡೆಯಿತು.
ಸಭೆಯನ್ನು ಉದ್ದೇಶಿಸಿ ಎಐಟಿಯುಸಿ ಮುಖಂಡ ಬಿ.ಶೇಖರ್, ಸಿಐಟಿಯು ಮುಖಂಡ ರಾಮಣ್ಣ ವಿಟ್ಲ, ಎಚ್. ಎಂ. ಎಸ್. ರಾಜ್ಯ ಮಖಂಡ ಇಬ್ರಾಹಿಮ್ ಗೋಳಿಕಟ್ಟೆ, ಸಾಮಾಜಿಕ ನ್ಯಾಯ ಪರ ಸಮಿತಿ ಮುಖಂಡ ಪ್ರಭಾಕರ್ ದೈವಗುಡ್ಡೆ ಮಾತಾಡಿದರು.
ಹಾರುನ್ ರಶೀದ್, ಹುಸೇನ್ ಪರ್ಲಿಯಾ, ಕೆ.ಈಶ್ವರ, ಬಾಬು ಭಂಡಾರಿ, ಕೌನ್ಸಿಲರ್ ಬಿ.ಮೋಹನ, ಬಿ.ಸಂಜೀವ ಬಂಗೇರ, ರಾಜಾ ಚಂಡ್ತಿಮಾರ್ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಇದಕ್ಕೂ ಮೊದಲು ಬಿ.ಸಿ.ರೋಡು ಸರ್ಕಲ್ ನಿಂದ ಮೆರವಣಿಗೆ ಹೊರಟು ಸರ್ವಿಸ್ ರಸ್ತೆ ಮೂಲಕ ಮೇಲು ಸೇತುವೆ ಕೆಳಭಾಗದಲ್ಲಿ ಸಮಾಪನೆಗೊಂಡಿತು.
ಸರಕಾರ ಜನರ ಏಕತೆ ಮೇಲೆ ನಡೆಯುತ್ತಿರುವ ದಾಳಿ ಹಾಗೂ ದುಡಿಯುವ ಜನರ ಹಕ್ಕುಗಳ ಮೇಲಿನ ದಾಳಿಯನ್ನು ಇದೇ ವೇಳೆ ಖಂಡಿಸಲಾಯಿತು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…