ಎಸ್.ಡಿ.ಪಿ.ಐ. ವತಿಯಿಂದ ಮುಂಬರುವ ಗ್ರಾಮ ಪಂಚಾಯತ್ ಮತ್ತು ವಿಧಾನಸಭಾ ಚುನಾವಣೆಯ ಪೂರ್ವಭಾವಿ ಸಭೆ ಪುದುವಿನಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಜಿಲ್ಲಾಧ್ಯಕ್ಷ ಹನೀಫ್ ಖಾನ್, ಪುದು ಗ್ರಾಮ ಪಂಚಾಯತ್ ನಲ್ಲಿ ಗ್ರಾಮಸ್ಥರ ಒಲವು ಎಸ್.ಡಿ.ಪಿ.ಐ ಗೆ ಇದೆ ಎಂಬೂದು ಕಳೆದ ಜಿಲ್ಲಾ ಪಂಚಾಯತ್ ಚುಣಾವಣೆಯಲ್ಲಿ ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ ಎಂದರು.
ರಾಜ್ಯ ಸಮಿತಿ ಸದಸ್ಯ ರಿಯಾಝ್ ಪರಂಗಿಪೇಟೆ ಮಾತನಾಡಿ ಪುದು ಪಂಚಾಯತ್ ಜನರು ಎಸ್.ಡಿ.ಪಿ.ಐ ಯ ಬಗ್ಗೆ ನಿರೀಕ್ಷೆ ಇಟ್ಟು ಕೊಂಡಿದ್ದಾರೆ ಎಂದು ಹೇಳಿದರು,
ಬಂಟ್ವಾಳ ಕ್ಷೇತ್ರ ಸಮಿತಿ ಅದ್ಯಕ್ಷ ಶಾಹುಲ್ ಎಸ್.ಎಚ್, ವಲಯಾದ್ಯಕ್ಷ ಸುಲೈಮಾನ್, ಗ್ರಾಮ ಸಮಿತಿ ಅದ್ಯಕ್ಷ ಇಕ್ಬಾಲ್, ಸೆಲೀಮ್ ಕೆ, ನಝೀರ್ ಹತ್ತನೇ ಮೈಲ್ ಕಲ್ಲು, ಮುಂತಾದ ಪದಾದಿಕಾರಿಗಳು ಉಪಸ್ಥಿತರಿದ್ದರು.