ಕಾನೂನಿನ ತಿಳುವಳಿಕೆಯನ್ನು ಶಿಕ್ಷಣ ಸಂಸ್ಥೆಗಳು ಹೊಂದಿದ್ದರೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ತಡೆಯಲು ಸಾಧ್ಯ ಎಂದು ವಕೀಲ ರಾಮಚಂದ್ರ ಶೆಟ್ಟಿ ದಂಡೆ ಹೇಳಿದರು.
ಬಂಟ್ವಾಳ ವಿದ್ಯಾಗಿರಿಯಲ್ಲಿರುವ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್ ನಲ್ಲಿ ಪೋಕ್ಸೋ ಕಾಯ್ದೆ ಕುರಿತು ಅವರು ಮಾಹಿತಿ ನೀಡಿದರು.
ಮಕ್ಕಳ ಭಾವನೆಗಳನ್ನು ತ್ವರಿತವಾಗಿ ತಿಳಿಯಲು ಶಿಕ್ಷಕರಿಗೆ ಸಾಧ್ಯವಿರುವ ಕಾರಣ, ಅವರಲ್ಲಿ ಜಾಗೃತಿ, ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಹೇಳಿದ ಅವರು, ಕಾಯ್ದೆ ವಿಚಾರವಾಗಿ ಸಂವಾದ ನಡೆಸಿದರು.
ಆಡಳಿತ ಸಮಿತಿ ಸಂಚಾಲಕ ಭಾಮಿ ವಿಠಲದಾಸ ಶೆಣೈ, ಪ್ರಾಂಶುಪಾಲೆ ರಮಾ ಶಂಕರ್, ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು, ಮಕ್ಕಳ ಸುರಕ್ಷಾ ಸಮಿತಿಯ ಸದಸ್ಯರು ಕಾರ್ಯಗಾರದಲ್ಲಿ ಪಾಲ್ಗೊಂಡರು. ಚಂದ್ರಿಕಾ ಪಿ ಸ್ವಾಗತಿಸಿ ನಿರ್ವಹಿಸಿದರು. ಕೇಶವತಿ ವಂದಿಸಿದರು.